Jarnail Singh murder
ಮದುವೆ ಸಮಾರಂಭದಲ್ಲಿ ಎಎಪಿ ನಾಯಕ ಜರ್ನೈಲ್ ಸಿಂಗ್ ಹತ್ಯೆ
ಅಮೃತ್ಸರ ಎಎಪಿ ನಾಯಕ ಜರ್ನೈಲ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಅತಿಥಿಗಳ ಸಮ್ಮುಖವೇ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜರ್ನೈಲ್ ಸಿಂಗ್ ತರಣ್ ತರಣ್ ಜಿಲ್ಲೆಯ ವಲ್ಥೋವಾ ಗ್ರಾಮದ ನಿವಾಸಿ. ಅಮೃತಸರದಲ್ಲಿ ಮದುವೆಯೊಂದರಲ್ಲಿ ಭಾಗಿಯಾಗಿದ್ದಾಗ ದುಷ್ಕರ್ಮಿಗಳು ಸಮೀಪದಿಂದಲೇ ಗುಂಡು ಹಾರಿಸಿ ಕೊಲೆಗೈದಿದ್ದಾರೆ. ಗುಂಡು ಜರ್ನೈಲ್ ಸಿಂಗ್ ಅವರ ಹಣೆ ಸೀಳಿದ್ದು ಕುಸಿದು ಬಿದ್ದಿದ್ದಾರೆ. ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಾಣ ಹೋಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ


