IT policy
ಹೊಸ ಐಟಿ ನೀತಿ ಮಾರ್ಗದರ್ಶನಕ್ಕಾಗಿ AI ಕೌಶಲ್ಯ ಕುರಿತು ಅಧ್ಯಯನ: ಸಚಿವ ಪ್ರಿಯಾಂಕ್ ಖರ್ಗೆ
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು, ರಾಜ್ಯದಲ್ಲಿನ ಕಾರ್ಯಪಡೆಯ ಮೇಲೆ ಕೃತಕ ಬುದ್ಧಿಮತ್ತೆ (AI) ಯ ಪ್ರಭಾವವನ್ನು ನಿರ್ಣಯಿಸಲು ಸಮಗ್ರ ಅಧ್ಯಯನವನ್ನು ಪ್ರಾರಂಭಿಸಿದೆ. 2025ರ ಹೊಸ ಐಟಿ ನೀತಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು AI ಕೌಶಲ್ಯದ ಕಾರ್ಯಪಡೆಯ ಸಾಧ್ಯತೆಗಳು ಮತ್ತು ಪ್ರಭಾವಗಳ ಕುರಿತು ಅಧ್ಯಯನವನ್ನು ಪ್ರಾರಂಭಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕರ್ನಾಟಕ