Menu

ಕತಾರ್‌ನಲ್ಲಿ ಇಸ್ರೇಲ್‌ ಪಡೆ ವೈಮಾನಕ ದಾಳಿ: ಹಮಾಸ್‌ ನಾಯಕನ ಮಗ ಸೇರಿ ಆರು ಮಂದಿ ಸಾವು

ಕತಾರ್‌ ರಾಜಧಾನಿ ದೋಹಾದಲ್ಲಿ ಇಸ್ರೇಲ್‌ ಪಡೆಯು ಭೀಕರ ವಾಯುದಾಳಿ ನಡೆಸಿದ್ದು, ನಮ್ಮ ನಾಯಕನ ಪುತ್ರ ಸೇರಿ ಕನಿಷ್ಠ 6 ಮಂದಿ ಮೃತಪಟ್ಟಿರುವುದಾಗಿ ಹಮಾಸ್‌ ಬಂಡುಕೋರರ ಗುಂಪು ಅಧಿಕೃತ ಹೇಳಿಕೆ ನೀಡಿದೆ. ಈ ದಾಳಿಯಲ್ಲಿ ಹಮಾಸ್ ನಾಯಕ ಖಲೀಲ್ ಅಲ್-ಹಯ್ಯನ ಪುತ್ರ, ಸಹಾಯಕ ಸಿಬ್ಬಂದಿ, ಭದ್ರತಾ ಅಧಿಕಾರಿ ಸೇರಿದಂತೆ ಕನಿಷ್ಠ 6 ಜನ ಪ್ರಾಣ ಕಳೆದುಕೊಂಡಿರುವುದಾಗಿ ಸಂಘಟನೆ ತಿಳಿಸಿದೆ. ಯುದ್ಧ ನಿಲ್ಲಬೇಕು, ಗಾಜಾದಿಂದ ಸೈನ್ಯ ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಗಾಜಾವನ್ನು ನೋಡಿಕೊಳ್ಳಲು