ipl 2025
ನಾಯಕನಾಗಿ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ ರಜತ್ ಪಟಿದಾರ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ ರಜತ್ ಪಟಿದಾರ್ ಐಪಿಎಲ್ ಟಿ-20 ಟೂರ್ನಿಯ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಕೋಲ್ಕತಾದಲ್ಲಿ ಶನಿವಾರ ಬೆಳಿಗ್ಗೆ ಮಳೆಯಾಗಿದ್ದು, ಪಂದ್ಯಕ್ಕೆ ಮಳೆ ಭೀತಿ ಇದೆ.
18ನೇ ಐಪಿಎಲ್‌ಗೆ ಇಂದು ಚಾಲನೆ: ಹೊಸ ಕುದುರೆ ಏರಿ ಹಳೇ ಬೇಟೆಗೆ ಹೊರಟ ಆರ್‌ಸಿಬಿ
ಕೋಲ್ಕತಾ: ರಾಯಲ್ ಚಾಲೆಂಜರ್ಸ್ (ಆರ್‌ಸಿ) ಫ್ರಾಂಚೈಸಿ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಿರೀಟಕ್ಕಾಗಿ ತನ್ನ 18ನೇ ಪ್ರಯತ್ನವನ್ನು ಪ್ರಾರಂಭಿಸುತ್ತಿದ್ದಂತೆ ಶಿಬಿರದಲ್ಲಿ ಉತ್ಸಾಹದ ಅಲೆ ಇದೆ. ಇನ್ನೂ ಐಪಿಎಲ್ ಗೆಲ್ಲದ ಮೂರು ತಂಡಗಳಲ್ಲಿ ಒಂದಾದ ಆರ್‌ಸಿ, ಐಪಿಎಲ್ 2025 ಗಾಗಿ ರಜತ್
IP 2025 ಐಪಿಎಲ್ ಉದ್ಘಾಟನಾ ಪಂದ್ಯ ನಡೆಯೋದು ಅನುಮನ!
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಐಪಿಎಲ್ ಟಿ-20 ಟೂರ್ನಿಯ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯ ನಡೆಯುವುದು ಅನುಮಾನವಾಗಿದೆ. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆಯಲಿರುವ ಪಂದ್ಯ ಉದ್ಘಾಟನಾ ಸಮಾರಂಭದ ನಂತರ ನಡೆಯಲಿದೆ.
ಮುಂಬೈ ಇಂಡಿಯನ್ಸ್ ಗೆ ಬಿಗ್ ಶಾಕ್: ಐಪಿಎಲ್ ಮೊದಲಾರ್ಧ ಪಂದ್ಯಗಳಿಂದ ಬುಮ್ರಾ ಔಟ್
ಮುಂಬೈ: ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ೨೦೨೫ ರ ಆರಂಭಿಕ ಸುತ್ತುಗಳಿಂದ ಹೊರಗುಳಿಯುವ ನಿರೀಕ್ಷೆಯಿದೆ. ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಸ್ಟಾರ್ ವೇಗಿ ಗಾಯಗೊಂಡರು, ಮತ್ತು ಆಸ್ಟ್ರೇಲಿಯಾದ ಎರಡನೇ
ಅಕ್ಸರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಆಗಿ ನೇಮಕ!
ಸ್ಪಿನ್ ಆಲ್ ರೌಂಡರ್ ಅಕ್ಸರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. 2019ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿರುವ ಅಕ್ಷರ್, 2024 ರ ಮೆಗಾ ಹರಾಜಿಗೆ ಮುನ್ನ 16.50 ಕೋಟಿ ರೂ.ಗೆ ತಂಡದ ಗರಿಷ್ಠ ಮೊತ್ತಕ್ಕೆ ತಂಡದಲ್ಲಿ ಉಳಿದುಕೊಂಡಿದ್ದರು. ಅಕ್ಸರ್
ಐಪಿಎಲ್‌ಗೆ ತಾಲೀಮು ಶುರು ಮಾಡಿದ ಆರ್‌ಸಿಬಿ
ಬೆಂಗಳೂರು: ಇನ್ನೊಂದು ವಾರದ ಅವಧಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದೊಂದಿಗೆ ಐಪಿಎಲ್ ಪ್ರಶಸ್ತಿ ಭೇಟೆ ಆರಂಭಿಸಲಿರುವ ಆರ್‌ಸಿಬಿ ತಂಡವು ಅಭ್ಯಾಸ ಶುರು ಮಾಡಿದೆ. ಈ ಬಾರಿಐಆದರೂ ಪ್ರಶಸ್ತಿ ಗೆಲ್ಲು ಎದುರು ನೋಡುತ್ತಿರುವ ಆರ್‌ಸಿಯು ಸಮರಾಭ್ಯಾಸ ಶುರು ಮಾಡಿದ್ದು, ತನ್ನ ಮೊದಲ
IPL 2025: ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ- ಕೆಕೆಆರ್ ಮುಖಾಮುಖಿ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ ತಂಡಗಳು ಮಾರ್ಚ್ 22ರಂದು ನಡೆಯುವ ಐಪಿಎಲ್ ಟಿ-20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ ಎಂದು ಹೇಳಲಾಗಿದೆ. ಕ್ರಿಕ್ ಬಜ್ ವೆಬ್ ನಲ್ಲಿ ಐಪಿಎಲ್ ಟಿ-20 ಟೂರ್ನಿಯ 2025ನೇ
ಮಾರ್ಚ್ 21ರಿಂದ ಐಪಿಎಲ್ ಟೂರ್ನಿ ಆರಂಭ, ಮೇ 25ಕ್ಕೆ ಅಂತ್ಯ: ರಾಜೀವ್ ಶುಕ್ಲ
ಐಪಿಎಲ್ ಟಿ-20 ಟೂರ್ನಿಯ 2025ನೇ ಸಾಲಿನ ಆವೃತ್ತಿ ಮಾರ್ಚ್ 21ರಿಂದ ಆರಂಭಗೊಳ್ಳಲಿದ್ದು, ಮೇ 25ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಐಪಿಎಲ್ ಉಪಾಧ್ಯಕ್ಷ ರಾಜೀವ್ ಶುಕ್ಲ ಹೇಳಿದ್ದಾರೆ. ಮುಂಬೈನಲ್ಲಿ ಭಾನುವಾರ ನಡೆದ ಬಿಸಿಸಿಐ ಸಭೆಯಲ್ಲಿ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಸಿದ್ಧವಾಗಿದ್ದು, ಉದ್ಘಾಟನಾ ದಿನ ಹಾಗೂ