inter caste marriage
ಬೇರೆ ಜಾತಿಯವನೊಂದಿಗೆ ಮಗಳ ಮದುವೆ: ಚಾಮರಾಜನಗರದಲ್ಲಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಬೇರೆ ಜಾತಿ ಯುವನೊಂದಿಗೆ ಮಗಳ ಮದುವೆ ಮಾಡಿದ್ದಕ್ಕಾಗಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಂಡಿಗೆರೆ ಗ್ರಾಮದ ಕೃಷ್ಣರಾಜು ಎಂಬವರ ಕುಟುಂಬನ್ನು ಬಹಿಷ್ಕರಿಸಲಾಗಿದೆ. ಈ ಬಹಿಷ್ಕಾರ ತೆರವಾಗಬೇಕಾದರೆ 5 ಲಕ್ಷ ರೂ. ತಪ್ಪು ಕಾಣಿಕೆ ಕೊಡಬೇಕು ಎಂದು ಹೇಳಲಾಗಿದೆ. ಕೃಷ್ಣಮೂರ್ತಿ ತಮ್ಮ ಮಗಳಿಗೆ ಆಕೆಯ ಆಸೆಯಂತೆ ಪ್ರೀತಿಸಿದ್ದ ಬೇರೆ ಜಾತಿಯ ಯುವಕನ ಜೊತೆ 2023ರಲ್ಲಿ ಮದುವೆ ಮಾಡಿದ್ದರು. ಮಗಳು ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಗಂಡನನ್ನು ಕಳೆದುಕೊಂಡಿದ್ದಾಳೆ.


