Menu

ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ: ಮೂವರು ಇನ್ಸ್​​ಪೆಕ್ಟರ್​ಗಳು ಸಸ್ಪೆಂಡ್

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿದ್ದ ಡ್ರಗ್ಸ್​ ಫ್ಯಾಕ್ಟರಿಯನ್ನು ಪತ್ತೆ ಮಾಡಿದ ಬಳಿಕ ಮೂವರು ಇನ್ಸ್​​ಪೆಕ್ಟರ್​ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಕೊತ್ತನೂರು, ಆವಲಹಳ್ಳಿ ಮತ್ತು ಬಾಗಲೂರು ಠಾಣೆಯ ಇನ್ಸ್​​ಪೆಕ್ಟರ್​​ಗಳನ್ನು ಅಮಾನತು ಮಾಡಿ ಕಮಿನಷರ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಕೊತ್ತನೂರು ಠಾಣೆ ಇನ್ಸ್​ಪೆಕ್ಟರ್ ಚೇತನ್ ಕುಮಾರ್, ಆವಲಹಳ್ಳಿ ಠಾಣೆಯ ಇನ್ಸ್​ಪೆಕ್ಟರ್ ರಾಮಕೃಷ್ಣ ರೆಡ್ಡಿ ಹಾಗೂ ಬಾಗಲೂರು ಠಾಣೆ ಇನ್ಸ್​ಪೆಕ್ಟರ್ ಶಬರೀಶ್ ಅವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.