innocent youths stabbed
ಹುಬ್ಬಳ್ಳಿ ತ್ರಿಕೋನ ಪ್ರೇಮ ಜಗಳ: ನಿರಪರಾಧಿ ಯುವಕರಿಬ್ಬರಿಗೆ ಚಾಕು ಇರಿತ
ಹುಬ್ಬಳ್ಳಿಯ ಗ್ಲೋಬಲ್ ಕಾಲೇಜಿನ ಬಿಬಿಎ ಮೊದಲ ವರ್ಷದ ವಿದ್ಯಾರ್ಥಿಗಳಾದ ಮಣಿಕಂಠ ಮತ್ತು ಪವನ್ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದು, ಇದೇ ವಿಚಾರದಲ್ಲಿ ಅವರಿಬ್ಬರ ಮಧ್ಯೆ ನಡೆದ ಜಗಳದಲ್ಲಿ ನಿರಪರಾಧಿ ಯುವಕರಿಬ್ಬರು ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಅಭಿಷೇಕ್ ಬಂಡಿವಂಡರ್ (22) ಮತ್ತು ಮಾರುತಿ ಬಂಡಿವಂಡರ್ (20) ಚಾಕು ಇರಿತಕ್ಕೆ ಒಳಗಾದವರು. ಇವರಿಬ್ಬರು ಪವನ್ ಸ್ನೇಹಿತರು. ದೇಶಪಾಂಡೆ ನಗರದ ನಿವಾಸಿಗಳಾದ ಇಬ್ಬರು ಆಟೊ ಚಾಲಕರು ಸ್ನೇಹಿತ ಪವನ್ ಜೊತೆ ಪಾರ್ಟಿಗೆ ಹೋಗಿ ಜೀವ ಕಳೆದುಕೊಂಡಿದ್ದಾರೆ.


