Menu

ಚೀನಾ ಯುದ್ಧ ವೇಳೆ ದೇಶಕ್ಕೆ 600 ಕೆಜಿ ಚಿನ್ನ, 3 ವಿಮಾನ, 90 ಎಕರೆ ಭೂಮಿ ನೀಡಿದ್ದ ರಾಣಿ ಕಾಮಸುಂದರಿ ದೇವಿ ಇನ್ನಿಲ್ಲ

1962ರಲ್ಲಿ ಭಾರತ- ಚೀನಾ ಯುದ್ಧ ನಡೆಯುವ ವೇಳೆ ದೇಶದ ರಕ್ಷಣೆಗಾಗಿ 600 ಕೆಜಿ ಚಿನ್ನ ಹಾಗೂ ಮೂರು ಖಾಸಗಿ ವಿಮಾನವನ್ನು ದಾನವಾಗಿ ನೀಡಿದ್ದ ದರ್ಭಾಂಗ ರಾಜಮನೆತನದ ಕೊನೆಯ ರಾಣಿ ಕಾಮಸುಂದರಿ ದೇವಿ( 96) ನಿಧನರಾಗಿದ್ದಾರೆ. ಮಹಾರಾಜ ದಿ. ಕಾಮೇಶ್ವರ ಸಿಂಗ್‌ ಅವರ ಮೂರನೇ ಪತ್ನಿಯಾಗಿದ್ದ ರಾಣಿ ಕಾಮಸುಂದರಿ ಅವರಿಗೆ ಮಕ್ಕಳಿರಲಿಲ್ಲ. 1932ರಲ್ಲಿ ಜನಿಸಿದ್ದ ರಾಣಿಗೆ ಎಂಟನೇ ವಯಸ್ಸಿನಲ್ಲಿ ಮದುವೆಯಾಗಿತ್ತು. 1962ರಲ್ಲಿ ಪತಿ ತೀರಿಕೊಂಡ ನಂತರ 64 ವರ್ಷ ಒಂಟಿಯಾಗಿ ಜೀವನ