Menu

ಭಾರತದ ಮೇಲೆ ಶೇ.500ರಷ್ಟು ಸುಂಕ ಹೇರಿಕೆ ಮಸೂದೆಗೆ ಟ್ರಂಪ್ ಸಹಮತ

ನ್ಯೂಯಾರ್ಕ್: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದ ಮೇಲೆ ಶೇ.500ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ. ಹಲವಾರು ಬಾರಿ ಎಚ್ಚರಿಕೆ ನಡುವೆಯೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಏಷ್ಯಾದ ರಾಷ್ಟ್ರಗಳಾದ ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳ ಮೇಲೆ ಸುಂಕದ ಬರೆ ಎಳೆಯುವ ಪ್ರಸ್ತಾಪಕ್ಕೆ ಡೊನಾಲ್ಡ್ ಟ್ರಂಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ರಕ್ಷಣಾ ವ್ಯಾಪಾರಿ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ.

ಭಾರತಕ್ಕೆ ಬಂದಿಳಿದ ಅಮೆರಿಕದ 3ನೇ ವಿಮಾನ: 112 ವಲಸಿಗರು ವಾಪಸ್

ಭಾರತದ 112 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಮೂರನೇ ವಿಮಾನ ಭಾನುವಾರ ರಾತ್ರಿ ಪಂಜಾಬ್ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಶನಿವಾರ ಎರಡನೇ ವಿಮಾನದಲ್ಲಿ 119 ಅಕ್ರಮ ವಲಸಿಗರನ್ನು ಕರೆತಂದಿದ ಅಮೆರಿಕದ ವಿಮಾನ ಭಾನುವಾರ ರಾತ್ರಿ 10.10ರ ಸುಮಾರಿಗೆ ಅಮೃತಸರ ವಿಮಾನ

15 ವರ್ಷಗಳಲ್ಲಿ 15,756 ಭಾರತೀಯ ವಲಸಿಗರು ಗಡಿಪಾರು, ಮೋದಿ ಸರ್ಕಾರದಲ್ಲೇ ಗರಿಷ್ಠ!

ಕಳೆದ 15 ವರ್ಷಗಳಲ್ಲಿ 15,756 ಭಾರತೀಯ ವಲಸಿಗರನ್ನು ಅಮೆರಿಕ ಗಡಿಪಾರು ಮಾಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ. ಭಾರತೀಯ ವಲಸಿಗರನ್ನು ಕೈ ಹಾಗೂ ಕಾಲುಗಳಿಗೆ ಕೊಳ ಹಾಕಿ ಪಂಜಾಬ್ ನ ಅಮೃತಸರಕ್ಕೆ ಅಮೆರಿಕ ಸೇನೆ ಬಿಟ್ಟುಹೋಗಿರುವ

ಲಂಕೆಯಿಂದ 34 ಭಾರತೀಯ ಬೆಸ್ತರ ಬಂಧನ

ರಾಮನಾಥಪುರ: ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಜಿಲ್ಲೆಯ 34 ಭಾರತೀಯ ಬೆಸ್ತರನ್ನು ಒಳಗೊಂಡ ಮೂರು ಭಾರತೀಯ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳನ್ನು ಲಂಕಾ ನೌಕಾಪಡೆಯು ನಸುಕಿನಲ್ಲಿ ವಶಪಡಿಸಿಕೊಂಡಿದೆ. ದೋಣಿಗಳು ಮತ್ತು ಬಂಽತ ಮೀನುಗಾರರನ್ನು ಶ್ರೀಲಂಕಾದ ದ್ವೀಪ ಪ್ರದೇಶ

ರಷ್ಯಾ ಸೇನೆಯಲ್ಲಿದ್ದ 12 ಭಾರತೀಯರು ಸಾವು: ಕೇಂದ್ರ

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಯಲ್ಲಿದ್ದ 12 ಮಂದಿ ಭಾರತೀಯರು ಮೃತಪಟ್ಟಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಸೇನೆಯಲ್ಲಿರುವ ಭಾರತೀಯರ ಪೈಕಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ವಿದೇಶಾಂಗ