Menu

ರಷ್ಯಾದಿಂದ ತೈಲ ಆಮದು ಮುಂದುವರಿಸಿದ್ರೆ ಮತ್ತಷ್ಟು ಸುಂಕ: ಭಾರತಕ್ಕೆ ಟ್ರಂಪ್‌ ಬೆದರಿಕೆ

ಭಾರತವು ರಷ್ಯಾದಿಂದ ತೈಲ ಆಮದು ಮುಂದುವರಿಸಿದರೆ ಮತ್ತಷ್ಟು ಸುಂಕ ಪಾವತಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಚೀನಾದ ನಂತರ ಭಾರತವೇ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಈ ಹಿಂದೆ ಟ್ರಂಪ್‌ ಅಸಹನೆ ಹೊರ ಹಾಕಿದ್ದರು. ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಮೊದಲ ಹಂತದ ಸುಂಕವಷ್ಟೇ ವಿಧಿಸಿದೆ, ಹಂತ-2 ಮತ್ತು ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈ

ಇನ್ನು ಜಿಎಸ್ಟಿ ಸ್ಲ್ಯಾಬ್ 5%, 18% ಅಷ್ಟೇ: ಸಚಿವೆ ನಿರ್ಮಲಾ ಸೀತಾರಾಮನ್‌

ಜಿಎಸ್‌ಟಿ ಕೌನ್ಸಿಲ್‌ ಎಂಟು ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಗೆ ಕ್ರಮ ಕೈಗೊಂಡಿದ್ದು, ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದ್ದು ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ. ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್ ಜೊತೆಗೆ ಐಷರಾಮಿ ವಸ್ತುಗಳಿಗೆ 40%

ಶಾಂಘಾಯ್ ಶೃಂಗಸಭೆ ಬಳಿಕ ಹೆಚ್ಚಿತು ಅಮೆರಿಕದ ತಳಮಳ

ಭಾರತದ ಜೊತೆ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಳ್ಳುವ ರೀತಿ ಅಮೆರಿಕ ಕೆಲವೊಂದು ನೀತಿಗಳನ್ನು ಜಾರಿಗೊಳಿಸಿದ ಪರಿಣಾಮ ಇಂದು ಅಮೆರಿಕಕ್ಕೆ ಭಾರಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಟ್ರಂಪ್‌ಗೆ ಬುದ್ಧಿ ಬರಲಿ… ಶಾಂಘಾಯ್ ಶೃಂಗಸಭೆ ಬಳಿಕ ಅಮೆರಿಕದ ತಳಮಳ ಅಧಿಕಗೊಂಡಿದೆ. ಭಾರತದ ದಿಟ್ಟ

ದೊಡ್ಡಣ್ಣನಿಗೆ ಶಾಂಘಾಯ್ ಶೃಂಗ ಸಭೆಯ ಗುದ್ದು.. !

ಶಾಂಘಾಯ್ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ಗಟ್ಟಿ ಧ್ವನಿ ಮೂಡಿಸಿದೆ. ಪೆಹಲ್‌ಗಾವ್ ನರಮೇಧದಲ್ಲಿ ಉಗ್ರರ ಪಾತ್ರವಿರುವುದನ್ನು ಭಾರತವು ಈ ವೇಳೆ ಒತ್ತಿ ಹೇಳಿದೆ. ಶಾಂಘಾಯ್ ಶೃಂಗಸಭೆಯು ಭಾರತದ ರಾಜತಾಂತ್ರಿಕತೆಯ ಜಯದ ಮೊದಲ ಅಧ್ಯಾಯವೊಂದೇ ಅಲ್ಲ. ಭವಿಷ್ಯದಲ್ಲಿ ರಷ್ಯಾ ಮತ್ತು ಚೀನಾ ಅಲ್ಲದೆ

ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆ 51.50 ರೂ. ಇಳಿಕೆ

ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ 51.50 ರೂ. ಇಳಿಕೆ ಮಾಡಿರುವುದಾಗಿ ಹೇಳಿವೆ.  14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈಗ ದೆಹಲಿಯಲ್ಲಿ 19

ಉಪರಾಷ್ಟ್ರಪತಿ ಚುನಾವಣೆಯೂ ಕುದುರೆ ವ್ಯಾಪಾರ ಆಯ್ತು…

ತಮಿಳುನಾಡಿನ ಓರ್ವ ಅಪ್ಪಟ ಬಲಪಂಥೀಯ ಹಾಗೂ ಕಟ್ಟಾ ಹಿಂದುತ್ವವಾದಿಯನ್ನು ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಈಗ ಆಯ್ಕೆ ಮಾಡಿದೆ. ಆದರೆ ಈ ವಿಚಾರದಲ್ಲಿ ಚಂದ್ರಬಾಬು ನಾಯಡು ಮನದಾಳ ಹಾಗೂ ರಾಜಕೀಯ ಲೆಕ್ಕಾಚಾರವೇ ಬೇರೆ ಇತ್ತು ! ಉಪರಾಷ್ತ್ರಪತಿ ಚುನಾವಣೆಗೆ ಈಗ ವೇದಿಕೆ ಸಜ್ಜಾಗಿದೆ.

ಪಾಕಿಸ್ತಾನಕ್ಕೆ ವೀಳ್ಯದೆಲೆ ರಫ್ತು ಬ್ಯಾನ್‌ ಮಾಡಿದ ಹೊನ್ನಾವರ ರೈತರು

ಪಹಲ್ಗಾಮ್​​ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್‌ ನಡೆಸಿ ತಕ್ಕ ಉತ್ತರ ನೀಡಿದೆ. ಇದಾದ ಬಳಿಕ ದೇಶದಲ್ಲಿ ಪಾಕ್‌ ವಿರುದ್ಧ ಅಭಿಯಾನವೇ ಶುರುವಾಗಿದೆ. ದೇಶದ ಚಿತ್ರರಂಗವು ಪಾಕ್‌ಗೆ ನೆರವಾಗಿರುವ ಟರ್ಕಿಯಲ್ಲಿ ಇನ್ನು ಮುಂದೆ ಶೂಟಿಂಗ್‌ ನಡೆಸದಿರಲು ನಿರ್ಧರಿಸಿದೆ, ಕರ್ನಾಟಕದ ವಿಜಯಪುರ

ಭಾರತಕ್ಕೆ ತಲೆಬಾಗಿದ ಪಾಕ್‌ನಿಂದ ಮಾತುಕತೆಗೆ ಆಹ್ವಾನ

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಪಡೆಯು ನಡೆಸಿದ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯಿಂದ ಕಂಗೆಟ್ಟಿರುವ ಪಾಕಿಸ್ತಾನ ಕೊನೆಗೂ ಭಾರತಕ್ಕೆ ಶರಣಾಗಿದೆ. ಪಾಕಿಸ್ತಾನ ಶಾಂತಿ ಸ್ಥಾಪನೆ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧವಾಗಿದೆ ಎಂದು ಅಲ್ಲಿನ ಪ್ರಧಾನಿ ಶೆಹಬಾಜ್‌ ಶರೀಫ್‌ ಭಾರತದ ಮುಂದೆ ಮಾತುಕತೆ ಪ್ರಸ್ತಾಪ

ಪಾಕ್‌ಗೆ ನೆರವಿತ್ತ ಟರ್ಕಿ: ಶತಕೋಟಿ ಡಾಲರ್​ ಒಪ್ಪಂದ ರದ್ದುಗೊಳಿಸುವುದೇ ಭಾರತ?

ಪಹಲ್ಗಾಮ್​ ದಾಳಿ ನಡೆಸಿರುವ ಪಾಕ್‌ ಆಶ್ರಯ ಪಡೆದಿರುವ ಉಗ್ರರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಅವರು ಊಹಿಸಿಕೊಳ್ಳಲು ಅಸಾಧ್ಯವಾಗುವಂಥ ಶಿಕ್ಷೆ ನೀಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದರಂತೆಯೇ ಪಾಕಿಸ್ತಾನವನ್ನು ಮಣಿಸಿರುವ ಭಾರತವು ಈಗ ಟರ್ಕಿಯ ಮೇಲೆಯೂ ಆಪರೇಷನ್​ ಶುರು

ಬೆಂಗಳೂರು ಸೇರಿದಂತೆ ದೇಶದ 13 ನಗರಗಳಲ್ಲಿ ಇ-ಪಾಸ್‌ಪೋರ್ಟ್‌

ದೇಶಾದ್ಯಂತ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳನ್ನು ನೀಡಲು ಆರಂಭಿಸಲಾಗಿದೆ. ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿಗೊಂಡಿದ್ದ ಈ ಯೋಜನೆ ಈಗ ದೇಶದ 13 ಪ್ರಮುಖ ನಗರಗಳಲ್ಲಿ ಲಭ್ಯವಿದೆ. ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮಡಿ ಜಾರಿಗೊಳಿಸಲಾದ ಈ ವ್ಯವಸ್ಥೆಯು ಭದ್ರತೆಯನ್ನು ದ್ವಿಗುಣಗೊಳಿಸುವು ದರ ಜೊತೆಗೆ ಅಂತರರಾಷ್ಟ್ರೀಯ ಪ್ರಯಾಣವನ್ನು