Menu

ಪೆನ್ನಾರ್ ನದಿ ನೀರು ವಿವಾದ: ನ್ಯಾಯಮಂಡಳಿ ರಚನೆಗೆ ಸುಪ್ರೀಂ ಆದೇಶ

ಕರ್ನಾಟಕ ಹಾಗೂ ತಮಿಳುನಾಡು ನಡುವೆ ಪೆನ್ನಾರ್ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ. ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ನ ಪೀಠವು ವಿವಾದ ಇತ್ಯರ್ಥಪಡಿಸಲು ನ್ಯಾಯಮಂಡಳಿ ರಚಿಸುವುದು ಸೂಕ್ತ. ಆದೇಶ ಪ್ರಕಟವಾದ ಒಂದು ತಿಂಗಳೊಳಗೆ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸಬೇಕು ಎಂದು ಕೇಂದ್ರಕ್ಕೆ ನಿರ್ದೇಶನ ನೀಡಿದರು. ಈ ಹಿಂದೆ ಅರ್ಜಿ ವಿಚಾರಣೆ

ಎಸ್‌ಐಆರ್‌ ವಿರೋಧಿಸಿ ಇಸಿಐ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ದೀದಿ

ಭಾರತ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ನಡೆಸುತ್ತಿರುವುದನ್ನು ವಿರೋಧಿಸಿ ಮಮತಾ ನೇತೃತ್ವದ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 49 ರೂ. ಏರಿಕೆ

19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 49 ರೂ. ಹೆಚ್ಚಿಸಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೇಂದ್ರ ಬಜೆಟ್‌ ಮಂಡನೆಗೂ ಮೊದಲೇ ವಾಣಿಜ್ಯ ಬಳಕೆಯ ಅನಿಲ

ಇಂದು ಕೇಂದ್ರ ಬಜೆಟ್‌ ಮಂಡನೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಬಜೆಟ್‌ ಮಂಡನೆಯಲ್ಲಿ 75 ವರ್ಷದ ಸಂಪ್ರದಾಯ ಮುರಿದು ಬಜೆಟ್ ಭಾಷಣದ ಎರಡನೇ ಭಾಗಕ್ಕೆ ಒತ್ತು ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಬಜೆಟ್ ಪ್ರಸ್ತುತಪಡಿಸುವ ರೀತಿ ಕೂಡ ಬೇರೆಯಾಗಿರಲಿದೆ ಎಂದು

ವಿಮಾನ ಪತನ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸೇರಿ ಐವರ ಸಾವು

ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನ ಇಂದು ಬೆಳಗ್ಗೆ ಪತನಗೊಂಡು ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಪೈಲಟ್‌ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಅಜಿತ್ ಪವಾರ್ ಬಳಸುತ್ತಿದ್ದ ವಿಮಾನವು

ದರೋಡೆಯಾಗಿದ್ದ 400 ಕೋಟಿ ರೂ.ಗಳ ಕಂಟೇನರ್ ಬೆಳಗಾವಿ ಗಡಿ ಭಾಗದಲ್ಲಿ ವಶ, ಇಬ್ಬರ ಬಂಧನ

ಬೆಳಗಾವಿ-ಗೋವಾ ಗಡಿ ಚೋರ್ಲಾ ಘಾಟ್​​ದಿಂದ ನಾಪತ್ತೆಯಾಗಿದ್ದ 400 ಕೋಟಿ ರೂ.ಗಳ ಎರಡು ಕಂಟೇನರ್​​ಗಳನ್ನು ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾಗ ಬೆಳಗಾವಿ ಗಡಿ ಭಾಗದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2025 ಅಕ್ಟೋಬರ್ 16ರಂದು ನಡೆದಿರುವ ದೇಶದ ಅತಿ ದೊಡ್ಡ ದರೋಡೆ ಪ್ರಕರಣ ಈ ಮೂಲಕ

ಕುಕಿ ಪ್ರೇಯಸಿ ಭೇಟಿಗೆ ಬಂದ ಮೈಥಿಯಿ ಪ್ರಿಯಕರನ ಗುಂಡಿಕ್ಕಿ ಕೊಲೆ: ಮಣಿಪುರ ಮತ್ತೆ ಉದ್ವಿಗ್ನ

ಕುಕಿ ಸಮುದಾಯದ ತನ್ನ ಪ್ರೇಯಸಿಯ ಭೇಟಿಗಾಗಿ ಬಂದಿದ್ದ ಮೈಥಿಯಿ ಯುವಕನ ಕೈಕಾಲು ಕಟ್ಟಿ ಹಾಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಣಿಪುರದ ಚುರಾಚಂದ್‌ಪುರದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ. ಮಣಿಪುರವು ಕುಕಿ ಹಾಗೂ ಮೈಥಿಯಿ ಸಮುದಾಯಗಳ ನಡುವಿನ ಸಂಘರ್ಷದಿಂದ

ದೆಹಲಿ ಗಣರಾಜ್ಯೋತ್ಸವ 2026: “ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ” ರಾಜ್ಯದ ಟ್ಯಾಬ್ಲೋ

2026ರ ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ  ರಾಜ್ಯದ  “ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ” (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. ಕೃಷಿಯಿಂದ ಕೈಗಾರಿಕೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ  ಹೆಗ್ಗಳಿಕೆಯನ್ನು ಸಂಕೇತಿಸುವಂತೆ ಕೆಂಪು ಕೋಟೆಯಲ್ಲಿ 

ನಾಳೆಯಿಂದ ಜ.27ರವರೆಗೆ ಬ್ಯಾಂಕ್‌ಗಳಿಗೆ ರಜೆ

ಜನವರಿ 24 ಶನಿವಾರದಿಂದ 27 ಮಂಗಳವಾರದವರೆಗೆ ಸತತ 4 ದಿನ ಬ್ಯಾಂಕುಗಳಿಗೆ ರಜೆ ಇದೆ. ಜನವರಿ 26ರಂದು ಗಣರಾಜ್ಯೋತ್ಸವ ರಜೆ ಇರುತ್ತದೆ. 27ರಂದು ಬ್ಯಾಂಕ್ ನೌಕರರ ಮುಷ್ಕರ ನಿಗದಿಯಾಗಿದೆ. ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ವಾರದ ರಜೆಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಿ

ಕೇಂದ್ರದಿಂದ ಕುಟುಂಬದ ಸ್ಥಿತಿಗತಿ, ಜಾತಿ ವಿವರ ಒಳಗೊಂಡ ಗಣತಿ ವೇಳಾಪಟ್ಟಿ ಪ್ರಕಟ

ಕೇಂದ್ರದಿಂದ ನಡೆಯಲಿರುವ ಜನಗಣತಿಗೆ ಗೃಹ ಸಚಿವಾಲಯ ವೇಳಾ ಪಟ್ಟಿ ಪ್ರಕಟಿಸಿದೆ. ಮನೆಪಟ್ಟಿ ಹಾಗೂ ಮನೆಗಣತಿ ಮತ್ತು ಜನಗಣತಿ ಹಂತಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 2021ರ ಜನಗಣತಿಗೆ ಸಿದ್ಧಪಡಿಸಿದ್ದ ಎಲ್ಲ 33 ಪ್ರಶ್ನೆಗಳನ್ನೇ ಈ ಬಾರಿಯೂ ಬಳಸಿಕೊಳ್ಳಲಿದೆ. ಕೋವಿಡ್-19 ಕಾರಣದಿಂದ 2021ರ ಜನಗಣತಿ