India news
ಪಿಯು, ಡಿಗ್ರಿ ಮುಗಿಸಿದ ನಕಲಿ ವೈದ್ಯರಿಂದ ಸಿಸೇರಿಯನ್: ಮಹಿಳೆ ಸಾವು
ಉತ್ತರ ಪ್ರದೇಶದ ಲಕ್ನೋದ ಅಂಬೇಡ್ಕರ್ ನಗರದಲ್ಲಿ ಪಿಯುಸಿ ವಿದ್ಯಾರ್ಥಿ ಮತ್ತು ಬಿಎ ಪದವೀಧರ ಐದು ವರ್ಷಗಳಿಂದ ಅಕ್ರಮ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿದ್ದು, ಗರ್ಭಿಣಿಗೆ ಸಿಸೇರಿಯನ್ ಮಾಡಲು ಹೋಗಿ ಪ್ರಾಣ ಕಸಿದಿದ್ದಾರೆ. ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸೆ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸುವುದಕ್ಕೆ ಹೋಗಿ ಈ ನಕಲಿ ಡಾಕ್ಟರ್‌ಗಳು ಆಕೆಯ ಜೀವ ತೆಗೆದಿದ್ದಾರೆ. ಪ್ರಕರಣದ ತನಿಖೆ ವೇಳೆ ಈ ಆಸ್ಪತ್ರೆಯೇ ಅಕ್ರಮ, ವೈದ್ಯರು ನಕಲಿ ಎಂಬುದು ಬಯಲಾಗಿದೆ,
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಏಳು ಕಾರ್ಮಿಕರು ಸಜೀವ ದಹನ
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಏಳು ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಕಾರ್ಖಾನೆಯೊಳಗೆ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆಯಿದೆ. ಘಟನೆ ನಡೆದಾಗ 25 ಕಾರ್ಮಿಕರು ಸ್ಥಳದಲ್ಲಿದ್ದರು ಎನ್ನಲಾಗಿದೆ. ಈ ಕಾರ್ಖಾನೆಯನ್ನು ವ್ಯಕ್ತಿಯೊಬ್ಬರು
ಪೂಜೆ, ಚಿಕಿತ್ಸೆ ಹೆಸರಲ್ಲಿ ವಿಷ ಲಡ್ಡು ತಿನ್ನಿಸಿ ಆರು ಮಂದಿಯ ಕೊಲೆಗೈದ ಫಕೀರ್ ಬಾಬಾ ಅರೆಸ್ಟ್
ಇತ್ತೀಚೆಗೆ ದೆಹಲಿಯ ಪೀರಾಗಢಿಯಲ್ಲಿ ಪಾರ್ಕ್ ಮಾಡಿದ್ದ ಕಾರಿನೊಳಗೆ ಮೂರು ಶವಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಫಕೀರ್ ಬಾಬಾ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲೂ ಇದೇ ರೀತಿ ಕನಿಷ್ಠ ಐದು ಕೊಲೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಕಡ್ಡಾಯ
‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಷ್ಟ್ರಗೀತೆಗೂ ಮುನ್ನ ʻವಂದೇ ಮಾತರಂʼ ಗೀತೆ ಹಾಡಬೇಕು ಅಥವಾ ನುಡಿಸಬೇಕು ಎಂದು ಹೊಸ ಮಾರ್ಗಸೂಚಿ ಹೊರಡಿಸಿದೆ. ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ್ದು, ಪದ್ಮ ಪ್ರಶಸ್ತಿ
24 ಕೊಲೆ ಕೇಸ್: ಬಿಹಾರ ಆರೋಪಿಗಳಾದ ತಂದೆ, ಮಗ ಬೆಂಗಳೂರಿನಲ್ಲಿ ಅರೆಸ್ಟ್
24 ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಬಿಹಾರದ ಅಪ್ಪ ಮಗನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳು ಒಂದು ವರ್ಷದಿಂದ ಬೆಂಗಳೂರಿನಲ್ಲಿ ಅಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಮಣಿಕ್ ಸಿಂಗ್ ಹಾಗೂ ಆತನ ತಂದೆ ಮನೋಜ್
ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ಗೊತ್ತುವಳಿ ನೋಟಿಸ್ ಸಲ್ಲಿಕೆ
ಕಾಂಗ್ರೆಸ್ ಪಕ್ಷವು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ಗೊತ್ತುವಳಿ ನೋಟಿಸ್ ಅನ್ನು ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಅವರಿಗೆ ಸಲ್ಲಿಸಿದೆ. ಟಿಎಂಸಿ ನಾಯಕರು ಈ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿಲ್ಲ. ನಿಯಮ 94ಸಿ ಅಡಿಯಲ್ಲಿ ಕಾಂಗ್ರೆಸ್ ಅವಿಶ್ವಾಸ
ಮಥುರಾದಲ್ಲಿ ಒಂದೇ ಕುಟುಂಬದ ಐವರು ಸುಸೈಡ್
ಉತ್ತರ ಪ್ರದೇಶದ ಮಥುರಾದಲ್ಲಿ ಒಂದೇ ಕುಟುಂಬ ಐವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪತಿ, ಪತ್ನಿ ಮತ್ತು ಮೂವರು ಮಕ್ಕಳು ರಾತ್ರಿ ಹಾಲಿಗೆ ವಿಷ ಬೆರೆಸಿ ಕುಡಿದಿದ್ದಾರೆ ಎನ್ನಲಾಗಿದೆ. ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ಪರ್‌ಪುರ ಗ್ರಾಮದಲ್ಲಿ ಈ
ಪಬ್‌ಜಿ ಆಡುತ್ತಿದ್ದವನಿಗೆ ರಕ್ತದೊತ್ತಡ ಹೆಚ್ಚಿ ಕುಸಿದು ಸಾವು
ಪಬ್‌ಜಿ ಗೇಮ್ ಆಡುತ್ತಿರುವಾಗಲೇ ರಕ್ತದೊತ್ತಡ ಹೆಚ್ಚಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೊಹಮ್ಮದ್ ಕೈಫ್ (22) ಮೃತಪಟ್ಟವ. ಖೈರ್‌ನಗರದ ಗುಲಾರ್ ವಾಲಿ ಗಾಲಿಯ ನಿವಾಸಿಯಾಗಿರುವ ಪ್ರಾಪರ್ಟಿ ಡೀಲರ್ ಫಾರುಕ್ ಎಂಬವರ ಪುತ್ರ ಕೈಫ್ ಕಳೆದ ನಾಲ್ಕು ತಿಂಗಳಿನಿಂದ
ಗರ್ಭಿಣಿಗೆ ಮಗು ಬೇಡವೆನಿಸಿದರೆ ಏಳೂವರೆ ತಿಂಗಳಲ್ಲೂ ಗರ್ಭಪಾತ ಹಕ್ಕಿದೆ: ಸುಪ್ರೀಂಕೋರ್ಟ್
ಗರ್ಭಿಣಿಗೆ ಮಗು ಬೇಡವೆನಿಸಿದರೆ ಏಳೂವರೆ ತಿಂಗಳು (30 ವಾರ) ತುಂಬಿದ ಬಳಿಕವೂ ಗರ್ಭಪಾತ ಮಾಡಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ನೀಡಿದೆ. ಈವರೆಗೆ ಭಾರತದಲ್ಲಿ 5 ತಿಂಗಳವರೆಗೆ ಮಾತ್ರ ಗರ್ಭಪಾತಕ್ಕೆ ಅನುಮತಿಯಿದೆ. ವಿಶೇಷ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ
ಜೇನುನೊಣ ದಾಳಿಯಿಂದ ಮಕ್ಕಳ ರಕ್ಷಿಸಿ ಜೀವ ತೆತ್ತ ಅಂಗನವಾಡಿ ಕಾರ್ಯಕರ್ತೆ
ಮಧ್ಯ ಪ್ರದೇಶದ ನೀಮಚ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜೇನುನೊಣ ದಾಳಿಯಿಂದ ಮಕ್ಕಳ ಪ್ರಾಣ ರಕ್ಷಿಸಿ ತನ್ನ ಜೀವವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ಅಂಗನವಾಡಿಯ ಕಾರ್ಯಕರ್ತೆಯ ಧೈರ್ಯ ಹಾಗೂ ಮಕ್ಕಳ ಮೇಲಿನ ಕಾಳಜಿ, ತ್ಯಾಗದಿಂದ 20 ಮಕ್ಕಳು ಪ್ರಾಣಾಪಾಯದಿಂದ




