Menu

ಗೋವಾ ನೈಟ್​​ ಕ್ಲಬ್‌ನಲ್ಲಿ ಅಗ್ನಿ ದುರಂತ: ಅಡುಗೆ ಸಿಬ್ಬಂದಿ, ಪ್ರವಾಸಿಗರು ಸೇರಿ 25 ಮಂದಿ ಸಜೀವ ದಹನ

ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್​​ಕ್ಲಬ್​​ನಲ್ಲಿ ಬೆಂಕಿ ಹೊತ್ತಿಕೊಂಡು 25 ಜನ ಸಜೀವ ದಹನಗೊಂಡಿದ್ದಾರೆ. ಘಟನೆಯಲ್ಲಿ 50 ಜನರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯರಾತ್ರಿ 12 ಗಂಟೆಗೆ ನೈಟ್​​ ಕ್ಲಬ್​ನಲ್ಲಿ ಅಗ್ನಿ ದುರಂತ ಸಂಭವಿಸಿದೆ, ಕ್ಲಬ್​​ನ ಅಡುಗೆ ಮನೆಯಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಮೃತಪಟ್ಟವರಲ್ಲಿ 4 ಜನರು ಪ್ರವಾಸಿಗರು, 14 ಜನರು ಸಿಬ್ಬಂದಿಯಾಗಿದ್ದು, 7 ಜನರ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಮತ್ತು ಅಗ್ನಿಶಾಮಕ ದಳದ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ

ಮದುವೆ ವಯಸ್ಸಾಗದಿದ್ರೂ ಲಿವ್‌ ಇನ್‌ ರಿಲೇಷನ್‌ಶಿಪ್‌ ಒಕೆ ಎಂದ ರಾಜಸ್ಥಾನ ಹೈಕೋರ್ಟ್‌

ಕಾನೂನುಬದ್ಧ ವಯಸ್ಸನ್ನು ತಲುಪದಿದ್ದರೂ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿರಲು ಯುವಕ ಯುವತಿ ಅರ್ಹರಾಗಿರುತ್ತಾರೆ, ಅವರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲಾಗುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್‌ ಹೇಳಿದೆ. ಕೋಟಾದ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ

ಸಿಬ್ಬಂದಿ ಸಮಸ್ಯೆ: ಸಾವಿರಕ್ಕೂ ಹೆಚ್ಚು ಇಂಡಿಗೊ ವಿಮಾನ ಹಾರಾಟ ರದ್ದು

ಸಿಬ್ಬಂದಿ ಸಮಸ್ಯೆಯಿಂದ 1000ಕ್ಕೂ ಹೆಚ್ಚು ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇದಕ್ಕಾಗಿ ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿ, ಫೆಬ್ರವರಿ ವೇಳೆಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದೆ. ಇಂಡಿಗೋ ಡಿಜಿಸಿಎಗೆ ಮಾಹಿತಿ ನೀಡಿದ್ದು, ಸದ್ಯದಲ್ಲೇ ಸಮಸ್ಯೆಗೆ ಪರಿಹಾರ ಸಿಗದಿರಬಹುದು. ಆದರೆ

ಗಂಡನಿದ್ದರೂ ಅಕ್ರಮ ಸಂಬಂಧ: ಮಕ್ಕಳನ್ನು ಮೋರಿಗೆಸೆದ ಪ್ರಿಯಕರ, ರಕ್ಷಿಸಿದ ಝೆಪ್ಟೊ ಡೆಲಿವರಿ ಬಾಯ್

ಗಂಡನಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೆ ಪ್ರಿಯಕರ ಆಕೆಯ ಇಬ್ಬರು ಮಕ್ಕಳನ್ನು ಮೋರಿಗೆ ಎಸೆದ ಘಟನೆ ನೋಯ್ಡಾದ ಸೆಕ್ಟರ್ 142 ರ ಬಳಿ ನಡೆದಿದೆ. ಸ್ಥಳಕ್ಕೆ ಡೆಲಿವರಿ ನೀಡುವುದಕ್ಕೆ ಬಂದಿದ್ದ ಝೆಪ್ಟೊ ಡೆಲಿವರಿ ಬಾಯ್ ಮಕ್ಕಳ ಕೂಗಾಟ ಕೇಳಿ ಮೋರಿ ಬಳಿ

ತನಗಿಂತ ಅಂದವಿದೆಯೆಂದು 6 ವರ್ಷದ ಮಗು ಕೊಂದ ಸೈಕೋ ಲೇಡಿ, ಈ ಹಿಂದೆ ಮಗ ಸೇರಿದಂತೆ 3 ಮಕ್ಕಳ ಕೊಲೆ

ತನಗಿಂತ ಸುಂದರವಾಗಿ ಕಾಣುತ್ತಿರುವ ಕಾರಣಕ್ಕೆ 6 ವರ್ಷದ ಮುದ್ದು ಸೊಸೆಯನ್ನು ಮಹಿಳೆಯೊಬ್ಬಳು ನೀರಿನ ಟಬ್‌ನಲ್ಲಿ ಮುಳುಗಿಸಿ ಸಾಯಿಸಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಈ ಪ್ರಕರಣ ವಿಚಾರಣೆ ನಡೆಸಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭಿಸಿದೆ. ಆರೋಪಿ ಪೂನಂ ಈ ಮೊದಲು

ಗೆಳತಿಯ ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

ಯುವಕನೊಬ್ಬ ಸಣ್ಣ ಜಗಳಕ್ಕೆ ಗೆಳತಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ. 20 ವರ್ಷದ ದಿವ್ಯಾ ನಿಗೋಟ್ ಕೊಲೆಯಾದ ಯುವತಿ. ಬೀಡ್ ಜಿಲ್ಲೆಯ 21 ವರ್ಷದ ಗಣೇಶ್ ಕೇಲ್ ಕೊಲೆಗೈದ ಬಳಿಕ ಆತ್ಮಹತ್ಯೆ ಮಾಡಿಕೊಂಡಾತ. ಇಬ್ಬರೂ ಪುಣೆಯ

ಸಂಗಾತಿಯ ಕೊಲೆಗೈದಾತ ಪೊಲೀಸ್‌ ಕಸ್ಟಡಿಯಲ್ಲಿ ಹೃದಯಾಘಾತದಿಂದ ಸಾವು

ಲಿವ್-ಇನ್ ಸಂಗಾತಿಯ ಕೊಂದಾತ ಪೊಲೀಸ್ ಕಸ್ಟಡಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೌರಾಷ್ಟ್ರದಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ನರೇಂದ್ರ ಸಿಂಗ್ ಧ್ರುವೇಲ್ ಸಂಗಾತಿಯ ಕೊಂದು ಪೊಲೀಸ್‌ ವಶದಲ್ಲಿರುವಾಗ ಮೃತಪಟ್ಟಿದ್ದಾನೆ. ಸೌರಾಷ್ಟ್ರದ ಸೆರಾಮಿಕ್ ಕಾರ್ಖಾನೆಯ ಕಾರ್ಮಿಕ ವಸತಿಗೃಹದಲ್ಲಿ ಈ ಜೋಡಿ ಮೂರು ತಿಂಗಳಿನಿಂದ ವಾಸವಿತ್ತು.

ಶಾಲೆಯಲ್ಲಿ ನಾಲ್ಕು ವರ್ಷದ ಮಗುವನ್ನು ಹೊಡೆದು ತುಳಿದು ಕೊಂದ ಸಹಾಯಕಿ

ಹೈದರಾಬಾದ್‌ನ ಜೀಡಿಮೆಟ್ಲಾದ ಶಾಪುರ್ ನಗರದಲ್ಲಿ ಮಹಿಳಾ ಸಹಾಯಕ ಸಿಬ್ಬಂದಿ ಶಾಲೆಯಲ್ಲಿ 4 ವರ್ಷದ ನರ್ಸರಿ ಮಗುವನ್ನು ನೆಲಕ್ಕೆ ತಳ್ಳಿ ಹೊಡೆದು ತುಳಿದು ಕೊಲೆ ಮಾಡಿದ್ದಾಳೆ. ಈ ಘಟನೆಯು ಎಲ್ಲ ಪೋಷಕರನ್ನು ಬೆಚ್ಚಿ ಬೀಳಿಸಿದ್ದು, ಶಾಲೆಯೊಳಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕವೊಡ್ಡಿದೆ. ಮಗುವನ್ನು

ಜಾತಿ ಪ್ರೀತಿಗೆ ಮಗಳ ಪ್ರಿಯಕರನ ಕೊಲೆಗೈದ ಪೋಷಕರು: ಶವವನ್ನೇ ಮದುವೆಯಾದ ಯುವತಿ

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಬೇರೆ ಜಾತಿ ಎಂಬ ಕಾರಣಕ್ಕೆ ಯುವತಿ ಪ್ರೀತಿಸುತ್ತಿದ್ದ ಹುಡುಗನನ್ನು ಆಕೆಯ ಮನೆಯವರು ಹೊಡೆದು ಕೊಂದರೆ ಸಾವಿನಿಂದ ಆಘಾತಗೊಂಡ ಯುವತಿ ಆತನ ಶವವನ್ನೇ ಮದುವೆಯಾಗಿ ಆತನ ಮನೆಯಲ್ಲೇ ಇರುವ ನಿರ್ಧಾರ ಮಾಡಿದ್ದಾಳೆ. 20 ವರ್ಷದ ಸಕ್ಷಮ್ ಟಾಟೆ ಕೊಲೆಯಾದ ಯುವಕ.

ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಕಾರಿನ ಮೇಲೆ ಉರುಳಿ ಒಂದೇ ಕುಟುಂಬದ 7 ಜನ ಸಾವು

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಕಾರಿನ ಮೇಲೆ ಉರುಳಿ ಒಂದೇ ಕುಟುಂಬದ ಏಳು ಜನ ಮೃತಪಟ್ಟಿದ್ದಾರೆ. ಅತಿ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದೆ. ಲಾರಿಯಲ್ಲಿದ್ದ ಜಲ್ಲಿಕಲ್ಲು ಕಾರಿನ ಮೇಲೆ