Menu

ಗಂಟೆಗೆ ಸಾವಿರ ಕಿಮಿ ವೇಗದಲ್ಲಿ ಸಂಚರಿಸುವ ಲೂಪ್

ಚೆನ್ನೈ: ಗಂಟೆಗೆ ಸಾವಿರ ಕಿಮಿ ವೇಗದಲ್ಲಿ ಸಂಚರಿಸುವ ಹೈಪರ್‌ಲೋಪ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಐಐಟಿ ಮದ್ರಾಸ್ ಮಾಡುತ್ತಿದೆ. ಹೈಪರ್ಲೂಪ್‌ನ ವಾಣಿಜ್ಯ ಕಾರ್ಯಾಚರಣೆ ಒಪ್ಪಂದಕ್ಕೆ ಸಹಿ ಹಾಕಲು ಯೋಜಿಸಲಾಗಿದೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವೀಜಿನಾಥನ್ ಕಾಮಕೋಟಿ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತೀಯ ರೈಲ್ವೇಯ ಧನಸಹಾಯದೊಂದಿಗೆ ಪ್ರಾರಂಭವಾದ ಹೈಪರ್ಲೂಪ್ ತಂತ್ರಜ್ಞಾನ ಸಂಶೋಧನೆ ಈಗ ಒಂದು ಹಂತಕ್ಕೆ ಬಂದಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲ ಪ್ರಗತಿಯ ಕುರಿತು ವಿವರಗಳನ್ನು ಸಹ ಹಂಚಿಕೊಂಡಿದ್ದಾರೆ.