Hyderabad
ಹೈದರಾಬಾದ್ ನಲ್ಲಿ ಅಗ್ನಿ ದುರಂತಕ್ಕೆ 17 ಮಂದಿ ಬಲಿ
ಹೈದರಾಬಾದ್‌ನ ಚಾರ್ಮಿನಾರ್ ಬಳಿಯ ಕಟ್ಟಡವೊಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಎಂಟು ಮಕ್ಕಳು ಮತ್ತು ಐದು ಮಹಿಳೆಯರು ಸೇರಿದಂತೆ ಕನಿಷ್ಠ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತಕ್ಕೆ ಕಾರಣ ಇನ್ನೂ ದೃಢಪಟ್ಟಿಲ್ಲ, ಶಾರ್ಟ್ ಸರ್ಕ್ಯೂಟ್ ದುರಂತಕ್ಕೆ ಕಾರಣವಾಗಿರ ಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಪ್ರದೇಶದಲ್ಲಿ ಆಭರಣ ಅಂಗಡಿಗಳಿದ್ದು, ಐತಿಹಾಸಿಕ ಚಾರ್ಮಿನಾರ್‌ಗೆ ಬಹಳ ಹತ್ತಿರದಲ್ಲಿದೆ. ಹನ್ನೊಂದು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ತೆಲುಗು ಚಿತ್ರ ನಿರ್ಮಾಪಕರ ಕಚೇರಿ, ನಿವಾಸಗಳಿಗೆ ಐಟಿ ರೇಡ್
ಗೇಮ್ ಚೇಂಜರ್ ನಿರ್ಮಾಪಕ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್ಡಿಸಿ) ಅಧ್ಯಕ್ಷ ದಿಲ್ ರಾಜು ಕಚೇರಿ, ನಿವಾಸ ಹಾಗೂ ಪುಷ್ಪ ಸಿನೆಮಾದ ನಿರ್ಮಾಣ ಸಂಸ್ಥೆಯ ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎರಡೂ ಸಿನಿಮಾಗಳಿಂದ ಗಳಿಕೆಯಾದ