Menu

ಹುಣಸೂರು ತೋಟದ ಮನೆಯಲ್ಲಿ ವೃದ್ಧ ದಂಪತಿಯ ಹತ್ಯೆ

ಹುಣಸೂರು ತಾಲೂಕಿನ ನಾಡಪ್ಪನಹಳ್ಳಿಯ ತೋಟದ ಮನೆಯಲ್ಲಿ ಹಾಡಹಗಲೇ ಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯನ್ನು ಕೊಲೆ ಮಾಡಿರುವುದು ಪತ್ತೆಯಾಗಿದೆ. ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಹಾಗೂ ಪತ್ನಿ ಶಾಂತಮ್ಮ (52) ಕೊಲೆಯಾದವರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದಾರೆ. ಮಗ ದೇವರಾಜ್ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ಸೋಮವಾರ ಸಂಜೆ ದೇವರಾಜ್ ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದರು. ಶುಂಠಿ ತುಂಬಲು ಕುಕ್ಕೆ ತರುವಂತೆ ಗಣೇಶ ಎಂಬಾತನನ್ನು ತಂದೆ ಇರುವ ತೋಟದ ಮನೆಗೆ ಕಳುಹಿಸಿದ್ದರು.