humor
ನಗುವನ್ನು ನಗ್ನಗೊಳಿಸಿದ ಸ್ಟ್ಯಾಂಡಪ್ ಕಾಮಿಡಿ!
ಪ್ರಾಚೀನ ಕಾಲದಿಂದಲೂ ಹಾಸ್ಯರಸಕ್ಕೆ ಅದರದ್ದೇ ಆದ ಮಹತ್ವ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಒಂಬತ್ತು ರಸಗಳಿದ್ದು ಇದು ಶೃಂಗಾರ ರಸದಷ್ಟೇ ಪ್ರಮುಖ ಸ್ಥಾನ ಪಡೆದಿದೆ. ಕ್ರಿ.ಪೂದಲ್ಲಿ ಗ್ರೀಕ್ ನಾಟಕಗಳಲ್ಲಿ ಕೇವಲ ಟ್ರ್ಯಾಜಿಡಿ ಇದ್ದು ಜನರನ್ನು ನಗಿಸುವ ಉದ್ದೇಶದಿಂದ ಕಾಮಿಡಿ ಪಾತ್ರಗಳನ್ನು ಸೃಷ್ಟಿಸುವುದಕ್ಕೆ ಪ್ರಾರಂಭಿಸಿದರು. ತದನಂತರ ಕ್ರಿ.ಶ ೧೭-೧೮ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಹಾಸ್ಯ ನಾಟಕಗಳು ಬೆಳಕು ಕಾಣುವುದಕ್ಕೆ ತೊಡಗಿದವು. ತದನಂತರ ಉದ್ದೇಶಪೂರ್ವಕವಾಗಿ ಹಾಸ್ಯ ಪಾತ್ರಗಳ ಮೂಲಕವೇ ಪ್ರಮುಖ ವಿಷಯಗಳನ್ನು ಹೇಳಿಸುವ ಪ್ರಯತ್ನ ಮಾಡಿದರು.


