Menu

ಮನುಷ್ಯರೆಲ್ಲ ಕಳೆದು ಹೋಗಿ ಧರ್ಮ-ಜಾತಿಗಳು ಜೀವ ಪಡೆದಿವೆ

ನಿಸ್ವಾರ್ಥದಿಂದ ಮುಂಜಾನೆ ಎಲ್ಲರನ್ನೂ ಎಬ್ಬಿಸಿ ಅನ್ನ ಅರಸುವ ಕಾಗೆ, ಸತ್ತಾಗ ಇಡುವ ಪಿಂಡ ತಿನ್ನಲು ಬಂದಾಗ ಅದರ ತಲೆಯಲ್ಲಿ ಸುಳಿಯುವುದಿಲ್ಲ ಸತ್ತವ ಯಾವ ಜಾತಿಯವನಿರಬಹುದು ಎಂಬ ಪ್ರಶ್ನೆ. ಮಂದಿರ, ಮಸೀದಿ, ಚರ್ಚ್‌ನ ತುತ್ತ ತುದಿಯಲ್ಲಿ ಕೂರುವ ಪಾರಿವಾಳಕ್ಕೆ ಯಾವ ವ್ಯತ್ಯಾಸವೂ ಕಂಡು ಬರುವುದಿಲ್ಲ. ಕಾರಣ, ಧರ್ಮಗಳ ಹಂಗಿಗೆ ಅದೆಂದಿಗೂ ಒಳಗಾಗಿಲ್ಲ. ಎರಡು ದೇಶಗಳ ನಡುವೆ ಎಳೆದ ಗಡಿರೇಖೆಯ ಮೇಲೆ ಹಾರಾಡುವ ಹದ್ದು ಎಂದಾದರೂ ಯೋಚನೆ ಮಾಡಿದ್ದಿದೆಯೇ, ಕೇಳಿ ಬರುತ್ತಿರುವ ಮದ್ದು