Menu

ಇನ್ಮುಂದೆ ಹುಬ್ಬಳ್ಳಿ, ಧಾರವಾಡ ಪ್ರತ್ಯೇಕ ಪಾಲಿಕೆ

ಹುಬ್ಬಳ್ಳಿ ಧಾರವಾಡ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ಮಾಡಲು ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಧಾರವಾಡ ನಗರದ ಮಹಾನಗರ ಪಾಲಿಕೆಯಲ್ಲಿ 2,75,339 ಜನಸಂಖ್ಯೆ ಮತ್ತು ಒಟ್ಟಾರೆ ವಿಸ್ತೀರ್ಣ 120.94 ಚ.ಕಿ.ಮೀ ಹಾಗೂ ಜನಸಾಂದ್ರತೆಯು 2277 ಇದೆ. ಹುಬ್ಬಳ್ಳಿ ಮಹಾನಗರ ಪಾಲಿಕೆಯ ಜನಸಂಖ್ಯೆಯು 6,68,449 ಮತ್ತು ಒಟ್ಟಾರೆ ವಿಸ್ತೀರ್ಣ 127.05 ಕಿ.ಮೀ. 5261 ಜನಸಾಂದ್ರತೆ ಇದೆ.

ವಿಜಯಪುರ-ಮಂಗಳೂರು ರೈಲು ಯಲಿವಿಗಿಯಲ್ಲಿ ನಿಲುಗಡೆಗೆ ಅವಕಾಶ: ರೈಲ್ವೆ ಇಲಾಖೆಗೆ ಬೊಮ್ಮಾಯಿ ಧನ್ಯವಾದ

ಹಾವೇರಿ: ವಿಜಯಪುರ – ಮಂಗಳೂರು ನಡುವೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ರೈಲನ್ನು ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿರುವ ಕೇಂದ್ರ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ.