Menu

ಹಾಂಕಾಂಗ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 44 ಮಂದಿ ಬಲಿ, 279 ಮಂದಿ ನಾಪತ್ತೆ!

ಹಾಂಕಾಂಗ್ ನ 7 ಅಂತಸ್ತುಗಳ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 44 ಮಂದಿ ಮೃತಪಟ್ಟು 279 ಮಂದಿ ನಾಪತ್ತೆಯಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾರತೀಯ ಕಾಲಮಾನ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿ ಬಹುಮಹಡಿ ಕಟ್ಟಡಗಳ ಸಮುಚ್ಚಯಕ್ಕೆ ಆವರಿಸಿದ್ದರಿಂದ ನೂರಾರು ಮಂದಿ ಮೃತಪಟ್ಟಿರುವ ಶಂಕೆ ಇದ್ದು, ದಶಕದಲ್ಲೇ ಕಂಡು ಕೇಳರಿಯದ ಭೀಕರ ಅಗ್ನಿ ದುರಂತ ಇದಾಗಿದೆ