Menu

ಖಾತೆ ಬದಲಾವಣೆ ಯಾತನೆಗೆ ಯಾರು ಹೊಣೆ?

ಕೆರೆ, ಕುಂಟೆ, ಗೋಮಾಳ, ಗುಂಡು ತೋಪು ಮತ್ತು ಗ್ರೀನ್ ಬೆಲ್ಟ್ ವಲಯದಲ್ಲಿ ತಲೆಯೆತ್ತಿದ್ದ ಕಟ್ಟಡಗಳೆಲ್ಲವೂ ಎ ಖಾತೆಗಳಾಗಿ ಪರಿವರ್ತಿತವಾಗಿರುವುದು ಭ್ರಷ್ಟ ಅಧಿಕಾರಿಗಳ ಕೈಚಳಕದಿಂದ. ಇದು ಆಸ್ತಿಗಳ ಖಾತೆ ಬದಲಾವಣೆಯೋ, ಬವಣೆಯೋ. ವ್ಯವಸ್ಥೆಯೋ, ದುರವಸ್ಥೆಯೋ. .? ರಾಜಧಾನಿ ಬೆಂಗಳೂರು ಸೇರಿದಂತೆ ನಾಡಿನ ಎಲ್ಲ ಕಡೆ ಸ್ಥಿರಾಸ್ತಿಗಳ ಖಾತೆ ಬದಲಾವಣೆಯ ಮಹಾ ಕಳವಳ ಶುರುವಾಗಿದೆ. ಅದರಲ್ಲಿಯೂ ಮುಖ್ಯವಾಗಿ ವಸತಿ ನಿವೇಶನಗಳ ಖಾತೆಗಳ ವಿಚಾರದಲ್ಲಿ ತಲೆದೋರಿರುವ ಗೊಂದಲ ಮತ್ತು ಸಂದಿಗ್ಧತೆಯನ್ನಿಲ್ಲಿ ಪ್ರಸ್ತಾಪಿಸಲಾಗುತ್ತಿದೆ. ರಾಜಧಾನಿ ಬೆಂಗಳೂರು