Menu

ಭಕ್ತಿಯ ಭವಸಾಗರದಲ್ಲಿ ನೊಂದಳು ಗಂಗೆ…!

ಈ ಲೇಖನ ಕೇವಲ ಪ್ರಯಾಗ್‌ರಾಜ್‌  ಒಂದನ್ನೇ ಗುರಿ ಮಾಡಿಕೊಂಡಿಲ್ಲ. ಪ್ರಪಂಚದಲ್ಲಿ ಬೇರೆ ಬೇರೆ ದೇಶಗಳು ತಮ್ಮ ನದಿ ಮತ್ತು ಸಮುದ್ರಗಳನ್ನು ಪ್ರೀತಿಯಿಂದ ಕಾಪಾಡಿಕೊಳ್ಳುತ್ತಿವೆ. ಕಾರಣ ಅವರಿಗೆ ನೀರಿನಿಂದ ಏನು ಉಪಯೋಗ ಎನ್ನುವುದು ಅರ್ಥವಾಗಿದೆ. ನಮ್ಮ ದೇಶದ ಜನರಿಗೆ ನೀರು ಪಾಪ ಕಳೆಯುವ ಅಮೃತ ಅಥವಾ ತೀರ್ಥ. ಗಂಗೆಯಲ್ಲಿ ಮುಳುಗಿದರೆ ಪಾಪಗಳು ನಾಶವಾಗುತ್ತವೆ ಎಂದಿದ್ದರೆ ಪಾಪಿಗಳು ನಿತ್ಯ ಪಾಪಗಳನ್ನೇ ಮಾಡಿ ನದಿಯಲ್ಲೋಗಿ ಮಿಂದು ಪುಣ್ಯ ತಂದುಕೊಳ್ಳುತ್ತಿದ್ದರು. ಜನ ಮರ ಗಿಡ ಹುತ್ತ