Holenaraseepur
ಹೊಳೆನರಸೀಪುರದಲ್ಲಿ ರೈಲಿಂದ ನದಿಗೆ ಬಿದ್ದ ವಿದ್ಯಾರ್ಥಿ
ಹಾಸನದ ಹೊಳೆನರಸೀಪುರ ಪಟ್ಟಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ವಿದ್ಯಾರ್ಥಿಯೊಬ್ಬ ನದಿಗೆ ಬಿದ್ದಿದ್ದಾನೆ. ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮುಜಾಮಿಲ್ ನದಿಗೆ ಬಿದ್ದ ವಿದ್ಯಾರ್ಥಿ. ವಿದ್ಯಾಥಿ ಕೆ.ಆರ್ ನಗರದಿಂದ ಹಾಸನಕ್ಕೆ ಎಕ್ಸ್ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದ. ಚಲಿಸುತ್ತಿದ್ದ ರೈಲಿನ ಬೋಗಿಯ ಮೆಟ್ಟಿಲ ಮೇಲೆ ಮುಜಾಮಿಲ್ ಒಂದು ಕಾಲಿಟ್ಟು, ಇನ್ನೊಂದು ಕಾಲು ಬೋಗಿಯಿಂದ ಹೊರಗೆ ಹಾಕಿ ನಿಂತಿದ್ದ. ಈ ವೇಳೆ ಆಯತಪ್ಪಿ 70 ರಿಂದ 80 ಅಡಿ ಎತ್ತರದಿಂದ ಹೇಮಾವತಿ ನದಿಗೆ ಬಿದ್ದಿದ್ದಾನೆ. ಹೇಮಾವತಿ