Hiriyuru accident
ಹಿರಿಯೂರು ಬಸ್ ದುರಂತ: ಏಪ್ರಿಲ್ನಲ್ಲಿ ಮದುವೆಯಾಗಬೇಕಿದ್ದ ಹಾಸನದ ನವ್ಯಾಳ ಸುಳಿವಿಲ್ಲ, ಆಸ್ಪತ್ರೆಗಳಿಗೆ ತಂದೆ ಅಲೆದಾಟ
ಚಿತ್ರದುರ್ಗದ ಹಿರಿಯೂರು ಬಳಿ ಅಪಘಾತ ನಡೆದು ಹತ್ತಕ್ಕೂ ಹೆಚ್ಚು ಮಂದಿ ಸಜೀವದಹನಗೊಂಡು ಹಲವರು ಗಾಯಗೊಂಡಿರುವ ಘಟನೆಯಲ್ಲಿ ಹಾಸನದ ಇಬ್ಬರು ಯುವತಿಯರ ಸುಳಿವೇ ಸಿಕ್ಕಿಲ್ಲ. ಅವರಲ್ಲಿ ಒಬ್ಬಾಕೆ ನವ್ಯಾಗೆ ಏಪ್ರಿಲ್ನಲ್ಲಿ ಮದುವೆ ನಿಗದಿಯಾಗಿದೆ. ಮಗಳ ಬಗ್ಗೆ ಏನಾದರೂ ಮಾಹಿತಿ ಸಿಗುವುದೇ ಎಂದು ತಂದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಮಗಳ ಪೋಟೊ ಹಿಡಿದುಕೊಂಡು ಅಲೆದಾಡುತ್ತ ಕಣ್ಣಿರು ಹಾಕುತ್ತಿದ್ದಾರೆ. ಹಾಸನದ ಚನ್ನರಾಯಪಟ್ಟಣ ತಾಲೂಕಿನ ನವ್ಯ ಮತ್ತು ಮಾನಸ ಕಣ್ಮರೆಯಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿರ್ಗಳಾಗಿ ಕೆಲಸ
ಹಿರಿಯೂರಿನಲ್ಲಿ ಶಾಲಾ ಬಸ್ಸಿಗೂ ಹೊತ್ತಿಕೊಂಡ ಬೆಂಕಿ: ಮಕ್ಕಳು ಸುರಕ್ಷಿತ
ಚಿತ್ರದುರ್ಗದ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಖಾಸಗಿ ಸ್ಲೀಪರ್ ಕೋಚ್ ಬಸ್ ನಡುವೆ ಅಪಘಾತ ನಡೆದಿದ್ದು, 17 ಮಂದಿ ಸಜೀವ ದಹನಗೊಂಡ ವೇಳೆ ಅದರ ಹಿಂದಿದ್ದ ಶಾಲಾ ಬಸ್ಸಿಗೂ ಬೆಂಕಿ ತಗುಲಿದೆ.



