Hihways
ರಾಜ್ಯದಲ್ಲಿ ಟೋಲ್ ದರ ಶೇ. 3 ರಿಂದ 5 ರಷ್ಟು ಏರಿಕೆ
ರಾಜ್ಯಾದ್ಯಂತ ಇರುವ 66 ಪ್ಲಾಜಾಗಳಲ್ಲಿ ಟೋಲ್ ದರಗಳು ಶೇ. 3 ರಿಂದ 5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದ್ದು, ಏಪ್ರಿಲ್ ಒಂದರಿಂದ ಜಾರಿಯಾಗಬಹುದು ಎನ್ನಲಾಗಿದೆ. ಬೆಂಗಳೂರಿನ ಸುತ್ತಲೂ ಇರುವ ಪ್ರಮುಖ ಹೆದ್ದಾರಿಗಳ ಟೋಲ್ ಪ್ಲಾಜಾಗಳಾದ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್