Heart attack death
ಚಿಂತಾಮಣಿಯಲ್ಲಿ ಜಾತಿ ಗಣತಿ ನಡೆಸುತ್ತಿದ್ದಾಗಲೇ ಶಿಕ್ಷಕನ ಸಾವು
ಜಾತಿ ಗಣತಿ ಕಾರ್ಯದಲ್ಲಿ ತೊಡಗಿದ್ದಾಗಲೇ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಇಂದು ನಡೆದಿದೆ. ಚಿಂತಾಮಣಿ ತಾಲೂಕಿನ ದಿಗವಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಮಕೃಷ್ಣಪ್ಪ (೫೭) ಜಾತಿ ಗಣತಿ ಕಾರ್ಯದಲ್ಲಿ ತೊಡಗಿರುವಾಗ ಹೃದಯಾಘಾತದಿಂದ ಅಸು ನೀಗಿದ್ದಾರೆ. ರಾಮಕೃಷ್ಣಪ್ಪ ಬೂರಗಮಾಕಲಹಳ್ಳಿ ಗ್ರಾಮದ ನಿವಾಸಿಯಾಗಿದ್ದರು. ಈ ಘಟನೆಯಿಂದ ಶಿಕ್ಷಕ ಸಮುದಾಯ ಹಾಗೂ ಸ್ಥಳೀಯರು ಆಘಾತಗೊಂಡಿದ್ದಾರೆ. ಚಿಂತಾಮಣಿ ನಗರದಲ್ಲಿ ನಡೆಯುತ್ತಿದ್ದ ಜಾತಿ ಗಣತಿ ಕಾರ್ಯದಲ್ಲಿ ತೊಡಗಿರುವಾಗ ರಾಮಕೃಷ್ಣಪ್ಪ ಅವರಿಗೆ
ರಜೆಯಲ್ಲಿ ಊರಿಗೆ ಬಂದಿದ್ದ ಕೋಲಾರದ ಯೋಧ ಹೃದಯಾಘಾತಕ್ಕೆ ಬಲಿ
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಆಚಂಪಲ್ಲಿ ಗ್ರಾಮದಲ್ಲಿ ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮುನಿ ನಾರಾಯಣ ಹೃದಯಾಘಾತದಿಂದ ಮೃತಪಟ್ಟವರು. ಮುನಿ ನಾರಾಯಣ ಬರ್ಮಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಕಳೆದ ಎರಡು ತಿಂಗಳ ಹಿಂದೆ ರಜೆಯ ಮೇಲೆ
ಬೆನ್ನು ನೋವೆಂದು ಬಾಸ್‌ಗೆ ಮೆಸೇಜ್: ಹತ್ತೇ ನಿಮಿಷದಲ್ಲಿ ಉದ್ಯೋಗಿ ಸಾವು
ಖಾಸಗಿ ಕಂಪನಿಯೊಂದರ ಉದ್ಯೋಗಿ 40 ವರ್ಷದ ಶಂಕರ್ ಎಂಬವರು ಬೆನ್ನು ನೋವು ಎಂದು ಸಿಕ್ ಲೀವ್ ಕೇಳಿ ಬಾಸ್‌ಗೆ ಮೆಸೇಜ್ ಮಾಡಿದ ಹತ್ತೇ ನಿಮಿಷಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಾಸ್ ಕೆ. ವಿ. ಅಯ್ಯರ್ ಎಂಬವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡ




