Menu

ಹಾವೇರಿಯಲ್ಲಿ ಮಟ್ಕಾ ದಂಧೆ: ಪಿಎಸ್‌ಐ ಅಮಾನತು

ಹಾವೇರಿ ಜಿಲ್ಲೆಯ ಗುತ್ತಲದಲ್ಲಿ ಎಗ್ಗಿಲ್ಲದೆ ಮಟ್ಕಾ ದಂಧೆ ನಡೆಯುತ್ತಿದ್ದು, ಈ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿದ ಪಿಎಸ್‌ಐ ಬಸನಗೌಡ ಬಿರಾದಾರ ಅವರನ್ನು ಅಮಾನತುಗೊಳಿಸಲಾಗಿದೆ. ಉಪಸಭಾಪತಿ ರುದ್ರಪ್ಪ ಲಮಾಣಿ ಸ್ಥಳೀಯ ಮಹಿಳೆಯರ ದೂರು ಆಲಿಸಿ ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು. ಇದಕ್ಕೂ ಜನಪ್ರತಿನಿಧಿಯೇ ಬರಬೇಕಾಯಿತು ಎಂಬ ಸ್ಥಳೀಯರ ಆಕ್ರೋಶ ಹಿನ್ನೆಲೆ ಐಜಿಪಿ ಈ ಕ್ರಮ ಕೈಗೊಂಡಿದ್ದಾರೆ. ಗುತ್ತಲ ಠಾಣೆಯ ಪಿಎಸ್‌ಐ ಬಸನಗೌಡ ಬಿರಾದಾರ ಅವರನ್ನು ಅಮಾನತು

ಲಂಚ ಸ್ವೀಕಾರ: ಹಾವೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ

ಹಾವೇರಿ ತಾಲೂಕಿನ ಗುತ್ತಲ ಸಮೀಪದ ನೆಗಳೂರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಿಗ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.  ಲೋಕಾಯುಕ್ತ ಸಿಪಿಐ ಶ್ರೀದೇವಿ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಆರೋಪಿಯನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಸಾಪುರ

ಹಾವೇರಿಯ ಯುವಕನ ವಂಚಿಸಿ ಮದುವೆಯಾದ ಎರಡು ಮಕ್ಕಳ ತಾಯಿ

ಇಬ್ಬರು ಮಕ್ಕಳ ತಾಯಿಯಾಗಿರುವ ವಿವಾಹಿತ ಮಹಿಳೆಯೊಬ್ಬಳು ಈ ಬಗ್ಗೆ ಯಾವುದೇ ಸುಳಿವು ನೀಡದೆ ಯುವಕನಿಗೆ ಮೋಸ ಮಾಡಿ ಆತನನ್ನು ಮದುವೆಯಾಗಿರುವ ಘಟನೆ ಹಾವೇರಿಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ವಂಚಕ ಮಹಿಳೆ ಯುವಕನ ಮದುವೆಯಾಗಿದ್ದಲ್ಲದೆ 2.5 ಲಕ್ಷ ರೂಪಾಯಿ ವಧು

ಸಾಲ ಕೊಡದೇ 4.20 ಲಕ್ಷ ಕಂತು ಕಟ್ಟಿಸಿಕೊಂಡ ಫೈನಾನ್ಸ್ ಕಂಪನಿ: ದಂಪತಿ ಪ್ರತಿಭಟನೆ

ಸಾಲವನ್ನೇ ಕೊಡದೇ 4.20 ಲಕ್ಷ ರೂ. ಕಂತು ವಸೂಲು ಮಾಡಿದ ಫೈನಾನ್ಸ್ ಕಂಪನಿ ವಿರುದ್ಧ ದಂಪತಿ ಪ್ರತಿಭಟನೆ ನಡೆಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹೌಸಿಂಗ್ ಲೋನ್ ಕೊದೇ 10 ತಿಂಗಳಿಂದ ಇಎಂಐ ಕಟ್ಟಿಸಿಕೊಂಡ ಹಿಂದೂಜಾ ಫೈನಾನ್ಸ್ ಸಿಬ್ಬಂದಿ ವಿರುದ್ಧ ದಂಪತಿ ಮಂಗಳವಾರ