farmers plea
ಭದ್ರಾ ಬಲದಂಡೆ ನಾಲೆ ಕೊನೆ ಭಾಗದ ರೈತರ ಮನವಿಗೆ ಡಿಕೆ ಶಿವಕುಮಾರ್ ಸ್ಪಂದನೆ
ಭದ್ರಾ ಬಲದಂಡೆ ಕಾಲುವೆಯಿಂದ ಅವೈಜ್ಞಾನಿಕವಾಗಿ ನೀರನ್ನು ಎತ್ತಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ನೀರು ನೀಡಲು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ನಿರ್ಧಾರ ಕೈಬಿಡಬೇಕು ಎಂದು ನಾಲೆಯ ಕೊನೆ ಭಾಗದ ರೈತರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ರೈತರ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದರು. ಬೆಂಗಳೂರಿನ ಕುಮಾರಪಾರ್ಕ್ ಸರಕಾರಿ ನಿವಾಸದಲ್ಲಿ ಶಿವಕುಮಾರ್ ಅವರನ್ನು ರೈತರ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿತು.