Menu

ಹಳಿ ತಪ್ಪಿದ ಬೆಂಗಳೂರು-ಕಾಮಕ್ಯ ಎಕ್ಸ್ ಪ್ರೆಸ್, ಒಬ್ಬನ ಸಾವು

ಬೆಂಗಳೂರು-ಕಾಮಕ್ಯ ಎಕ್ಸ್ ಪ್ರೆಸ್ ರೈಲಿನ 11 ಬೋಗಿಗಳು ಒಡಿಶಾದ ಕಟಕ್ ನಲ್ಲಿ ಹಳಿ ತಪ್ಪಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಹೊರಟು ಒಡಿಶಾದ ಗುವಾಹತಿಗೆ ಸಂಚರಿಸುತ್ತಿದ್ದ  ರೈಲು  ಕಟಕ್ ನ ನೆರ್ಗುಂಡಿ ರೈಲು ನಿಲ್ದಾಣದ ಸಮೀಪ  ಹಳಿ ತಪ್ಪಿದೆ. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ರೈಲು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಹಳಿ ತಪ್ಪಿದ್ದರಿಂದ ಮೂರು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ತನಿಖೆಗೆ ಆದೇಶಿಸಲಾಗಿದೆ

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಾಚಾರ್ ಇನ್ನಿಲ್ಲ

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಾಚಾರ್ (96)  ಶುಕ್ರವಾರ ಮುಂಜಾನೆ  ನಿಧನರಾದರು. ಬೆಂಗಳೂರಿನ ಮೊದಲ ಪೊಲೀಸ್ ಕಮಿಷನರ್ ಸಿ.ಚಾಂಡಿ ಅವರ ಅಧಿಕಾರಾವಧಿಯಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಬಿ.ಎನ್ ಗರುಡಾಚಾರ್ ಅವರು ಮೊಟ್ಟ ಮೊದಲು ಎನ್.ಆರ್ ಜಂಕ್ಷನ್ (ಎಲ್ಐಸಿ ಕಚೇರಿ

ರಾಜ್ಯದಲ್ಲಿ ಹೆಚ್ಚುತ್ತಿದೆ ವೈರಲ್‌ ಜ್ವರ ಪ್ರಕರಣಗಳು

ಬೇಸಿಗೆ ಮಧ್ಯೆ ಮಳೆಯೊಂದಿಗೆ ವಾತಾವರಣ ಬದಲಾಗುತ್ತಿದ್ದಂತೆ ಬೆಂಗಳೂರು ನಗರ ಒಳಗೊಂಡಂತೆ ರಾಜ್ಯದಲ್ಲಿ ವೈರಲ್‌ ಜ್ವರ ಕೇಸ್‌ಗಳು ಹೆಚ್ಚುತ್ತಿವೆ.  ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ನಿಗಾ ಘಟಕವು ಈ ಸಂಬಂಧ ಮಾಹಿತಿ ಪ್ರಕಟಿಸಿ ಅಂಕಿ ಅಂಶಗಳನ್ನು ನೀಡಿದೆ. ಮಾರ್ಚ್ ಆರಂಭದಲ್ಲಿ ಸಂಪೂರ್ಣ

ಆಯುರ್ವೇದ ಉಳಿಸಿ ಬೆಳೆಸಿಕೊಂಡು ಹೋಗಬೇಕು: ಡಿಕೆ ಶಿವಕುಮಾರ್

ಆಯುರ್ವೇದ ಚಿಕಿತ್ಸಾ ಪದ್ಧತಿ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ಇದು ನಮ್ಮ ಮೂಲ. ಆಯುರ್ವೇದ ನಮ್ಮ ಆಸ್ತಿಯಾಗಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು. ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ಪುರುಷ ವಿದ್ಯಾರ್ಥಿನಿಲಯದ

ಎಚ್ಚರಿಕೆ, ಇದು ಕ್ಯಾಬ್, ಓಯೋ ಅಲ್ಲ; ಪ್ರೇಮಿಗಳಿಗೆ ಬೆಂಗಳೂರು ಚಾಲಕನ ವಾರ್ನಿಂಗ್‌ ವೈರಲ್‌

ಕೆಲವೊಂದು ಪ್ರೇಮಿಗಳು ಲೋಕದ ಪರಿವೆ ಇಲ್ಲದೆ ಕಿಸ್ಸಿಂಗ್-ರೊಮ್ಯಾನ್ಸ್‌ ಎಂದು ಅತಿರೇಕವಾಗಿ ವರ್ತಿಸುತ್ತಿರುವುದರಿಂದ ಬೇಸತ್ತ ಬೆಂಗಳೂರಿನ ಕ್ಯಾಬ್‌ ಚಾಲಕರೊಬ್ಬರು ಕೈಗೊಂಡ ಕ್ರಮ ವೈರಲ್‌ ಆಗ್ತಿದೆ. ಕ್ಯಾಬ್‌ ಚಾಲಕ ” ನೋ ರೊಮ್ಯಾನ್ಸ್, ಇದು ಕ್ಯಾಬ್‌ ಓಯೋ ಅಲ್ಲ, ನಡುವೆ ಅಂತರವಿರಲಿ,” ಎಂದು ತನ್ನ

ಬೆಂಗಳೂರಿನಲ್ಲಿ ರಿಕವರಿ ಚಿನ್ನ ಗುಳುಂ ಮಾಡಿದ ಪಿಎಸ್‌ಐಯಿಂದ ವ್ಯಾಪಾರಿಗೂ 950 ಗ್ರಾಂ ಚಿನ್ನ ವಂಚನೆ

ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ ಚಿನ್ನವನ್ನು ದುರ್ಬಳಕೆ ಮಾಡಿಕೊಂಡು, ಬಳಿಕ ಚಿನ್ನದ ಅಂಗಡಿ ಮಾಲೀಕನ ಬಳಿ ರಿಕವರಿ ಚಿನ್ನ ತೋರಿಸಬೇಕಿದ್ದು ಫೋಟೋ ತೆಗೆಸಿ ವಾಪಸ್ ಕೊಡುತ್ತೇನೆ ಎಂದು ಹೇಳಿ 950 ಗ್ರಾಂ ಚಿನ್ನದ ಗಟ್ಟಿಯನ್ನು ಪಡೆದುಕೊಂಡು ವಂಚಿಸಿದ್ದ ಕಾಟನ್​​ಪೇಟೆ ಠಾಣೆ ಪಿಎಸ್​ಐ ಸಂತೋಷ್ ವಿರುದ್ಧ

ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್‌ ಅರೆಸ್ಟ್‌

ಪೊಲೀಸ್ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆಟೊ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆಸೀಫ್ ಬಂಧಿತ ಆರೋಪಿ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಆಸೀಫ್ ಪೊಲೀಸ್ ಎಂದು ಹೇಳಿಕೊಂಡು ಬಂದು ಹಣ ವಸೂಲಿ ಮಾಡುತ್ತಿದ್ದ. ಪಾರ್ಕ್‌ನಲ್ಲಿರುವವರನ್ನು ಬೆದರಿಸಿ ಹಣ ನೀಡುವಂತೆ

ಸ್ನೇಹಿತೆಯ ಭೇಟಿಯಾಗಲು ಬುರ್ಖಾ ಧರಿಸಿ ಹಾಸ್ಟೆಲ್‌ಗೆ ಬಂದ ಯುವಕ

ಬೆಂಗಳೂರಿನ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ಸ್ನೇಹಿತೆಯನ್ನು ಭೇಟಿಯಾಗಲು ಯುವಕನೊಬ್ಬ ಬುರ್ಖಾ ಧರಿಸಿ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿರುವ ಘಟನೆ ನಡೆದಿದೆ. ಕಾಲೇಜಿನ ರಮಾಬಾಯಿ ಹಾಸ್ಟೆಲ್‌ಗೆ ರಾತ್ರಿ 7 ಗಂಟೆಗೆ ಯುವಕ ಬುರ್ಖಾ ಧರಿಸಿ ಪ್ರವೇಶಿಸಿದ್ದ. ಬುರ್ಖಾ ಧರಿಸಿದ ಯುವಕ ಮಾಲೂರು ಮೂಲದವನು ಎನ್ನಲಾಗಿದೆ.

ಬೆಂಗಳೂರಿನಲ್ಲಿ ಕಾವೇರಿ ಆರತಿ ಪ್ರಶ್ನಿಸಿ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ

ಬೆಂಗಳೂರು ನಗರದ ಸ್ಯಾಂಕಿ ಟ್ಯಾಂಕ್​ನ ಬಫರ್ ಝೋನ್​ನಲ್ಲಿ ರಾಜ್ಯ ಸರ್ಕಾರ ಮಾರ್ಚ್ 21ರಂದು ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಕಾವೇರಿ ಆರತಿ ಸಂಬಂಧ ಬೆಂಗಳೂರು ಜಲ ಮಂಡಳಿಯ ಅಧಿಕಾರಿಗಳು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಸಂಬಂಧ ಮಾಧ್ಯಮಗಳಲ್ಲಿ

ದಿನಕ್ಕೆ 5 ಸಾವಿರ ರೂ.ಬೇಡಿಕೆ, ನಿತ್ಯ ಕಿರುಕುಳವೆಂದು ಪತ್ನಿ ವಿರುದ್ಧ ಬೆಂಗಳೂರು ಟೆಕ್ಕಿ ದೂರು

ಸಂಸಾರ ಮಾಡಲು ದಿನವೊಂದಕ್ಕೆ 5,000 ರೂ. ನೀಡುವಂತೆ ಬೇಡಿಕೆ ಜೊತೆಗೆ ಮಕ್ಕಳು ಬೇಡ ಎಂದು ಪತ್ನಿ ತನಗೆ ಕಿರುಕುಳ ಕೊಡುತ್ತಿರುವುದಾಗಿ ಆರೋಪಿಸಿ ಪತಿ ಶ್ರೀಕಾಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಟೆಕ್ಕಿ ಶ್ರೀಕಾಂತ್ ಹಾಗೂ ಮಹಿಳೆ 2022 ರಲ್ಲಿ ಮದುವೆ ಆಗಿದ್ದಾರೆ.