Menu

ಬೆಂಗಳೂರಿನಲ್ಲಿ ಅಗ್ನಿ ಆಕಸ್ಮಿಕ: ಕಾರ್ಮಿಕರು ವಾಸವಿದ್ದ ಟೆಂಟ್‌ಗಳು ಭಸ್ಮ

ಬೆಂಗಳೂರಿನ ವೀರನಪಾಳ್ಯದಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿ ಕೂಲಿ ಕಾರ್ಮಿಕರು ವಾಸವಿದ್ದ 40ಕ್ಕೂ ಹೆಚ್ಚು ಶೆಡ್‍ಗಳು ಬೆಂಕಿಯಿಂದ ಭಸ್ಮವಾಗಿ ಹೋಗಿವೆ. ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿ ಕೂಲಿ ಕಾರ್ಮಿಕರು 50 ಶೆಡ್ ನಿರ್ಮಿಸಿಕೊಂಡಿದ್ದರು. ಒಂದು ಶೆಡ್‍ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೇರೆ ಶೆಡ್‍ಗಳಿಗೂ ವ್ಯಾಪಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಜನ ಹೊರಗೆ ಓಡಿ ಹೋಗಿದ್ದಾರೆ. ವಿಚಾರ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ

ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯ: ಬೆಂಗಳೂರಿನಲ್ಲಿ ಬ್ಲಾಕ್‌ ಟಿಕೆಟ್‌ ಮಾರಾಟಗಾರರು ಸಿಸಿಬಿ ಬಲೆಗೆ

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದ ಟಿಕೆಟ್‌ಗಳನ್ನ ದುಪ್ಪಟ್ಟು ಬೆಲೆಗೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡಿಸಿಪಿ ಅಕಾಯ್ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ

ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ರೈಲು: ಸಚಿವ ಸೋಮಣ್ಣ

ಬೆಂಗಳೂರಿನಿಂದ  ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ 12ರಿಂದ ಹೊಸ ರೈಲು ಸಂಚರಿಸಲಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ರೈಲ್ವೆ ಗೇಟ್ ಮೇಲ್ಸತುವೆಗೆ ಗುದ್ದಲಿ ಪೂಜೆ ನಡೆಸಿದ ಬಳಿಕ ಮಾತನಾಡಿ, ಏಪ್ರಿಲ್‌ 12 ರಂದು ಬೆಂಗಳೂರಿನಿಂದ

ಬೇಸಿಗೆ ಮಳೆಯಿಂದ ಬೆಂಗಳೂರಿನಲ್ಲಿ ಡೆಂಗ್ಯು, ಚಿಕನ್‌ ಗುನ್ಯ ಆತಂಕ

ಬೇಸಿಗೆ ಮಳೆಯ ಕಾರಣ ಬೆಂಗಳೂರಿನಲ್ಲಿ ಮತ್ತೆ ಡೆಂಗ್ಯು ಹಾಗೂ ಚಿಕುನ್ ಗುನ್ಯ ಭೀತಿ ಶುರುವಾಗಿದೆ‌‌. ಕಳೆದ ಮೂರು ತಿಂಗಳಲ್ಲಿ ನಗರದಲ್ಲಿ 910ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಳೆ ಬಂದ ಬಳಿಕ ಒಂದೇ ವಾರದಲ್ಲಿ 75ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಳೆದ ಒಂದೇ

ಬೆಂಗಳೂರಿನಲ್ಲಿ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲಿಂದ ಹೊಡೆದ ಸಾಲಗಾರ

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಸಾಲಗಾರ ಕಲ್ಲಿನಿಂದ ತಲೆಗೆ ಹೊಡೆದಿರುವ ಘಟನೆ ನಡೆದಿದೆ. ಚಂದನ್ ಕಲ್ಲೇಟು ತಿಂದ ಬ್ಯಾಂಕ್ ಸಿಬ್ಬಂದಿ. ರಮೇಶ್ ಎಂಬಾತ ಎರಡು ತಿಂಗಳಿನಿಂದ ಬ್ಯಾಂಕ್‌ ಸಾಲದ ಇಎಂಐ ಕಟ್ಟಿರಲಿಲ್ಲ. ಕಾಲ್‌ ಮಾಡಿದರೆ ರಿಸೀವ್

ತೆನ್ನೀರ ಮಹಿನ ನನ್ನ ಸಾವಿಗೆ ನೇರ ಹೊಣೆ: ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತನ ಡೆತ್‌ನೋಟ್‌

ಬೆಂಗಳೂರಿನ ನಾಗವಾರದ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಡಿಕೇರಿಯ ಬಿಜೆಪಿ ಕಾರ್ಯಕರ್ತನ ಡೆತ್‌ ನೋಟ್‌ನಲ್ಲಿ, ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ ತೆನ್ನೀರ ಮಹೀನ  Tenneera Maheena (9449156215) ನನ್ನ ಸಾವಿಗೆ ನೇರ ಹೊಣೆ ಎಂದು ಬರೆದಿರುವುದು ಪತ್ತೆ ಯಾಗಿದೆ.

ಬೆಂಗಳೂರಿನಲ್ಲಿ 25ರ ಯುವತಿಯ ಹನಿಟ್ರ್ಯಾಪ್‌ ಬಲೆಗೆ ಸಿಲುಕಿದ 68ರ ವೃದ್ಧ

ಬೆಂಗಳೂರಿನಲ್ಲಿ 68ರ ವೃದ್ಧರೊಬ್ಬರು 25ರ ಯುವತಿಯ ಹನಿಟ್ರ್ಯಾಪ್‌ ಬಲೆಯೊಳಗೆ ಸಿಲುಕಿರುವುದು ಬಯಲಾಗಿದೆ. ಯುವತಿ ವೃದ್ಧರಲ್ಲಿ ಎರಡು ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟು ಬೆದರಿಸಿರುವುದಾಗಿ ಆರೋಪಿಸಲಾಗಿದೆ. ಇಬ್ಬರು ಯುವಕರ ಮೂಲಕ ಯುವತಿ 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾಳೆ. ಎರಡು ಕೋಟಿ ರೂ. ನೀಡದಿದ್ದರೆ

ಬೆಂಗಳೂರಿನಲ್ಲಿ ಅಣ್ಣನೊಂದಿಗೆ ತೆರಳುತ್ತಿದ್ದ ಬಿಹಾರ ಯುವತಿಯ ಅಪಹರಿಸಿ ರೇಪ್‌

ಬೆಂಗಳೂರು ಕೆಆರ್​ ಪುರಂ ರೈಲ್ವೆ ಸ್ಟೇಷನ್​ನಿಂದ ಬುಧವಾರ ಮಧ್ಯರಾತ್ರಿ ಅಣ್ಣನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬಿಹಾರದ ಯುವತಿಯನ್ನು ಅಪಹರಿಸಿದ ಕಿರಾತಕರು ಅತ್ಯಾಚಾರ ಎಸಗಿದ್ದಾರೆ. ಯುವತಿಯ ಅಣ್ಣನ ಮೇಲೂ ಹಲ್ಲೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಯುವತಿ

ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್‌ ಲೋಕಾಯುಕ್ತ ದಾಳಿ ವಿಚಾರ ತಿಳಿದು ಎಸ್ಕೇಪ್‌

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ಸ್‌ಪೆಕ್ಟರ್‌ ಕುಮಾರ್ ಅವರ ವಿರುದ್ಧ ಲೋಕಾಯುಕ್ತ ದಾಳಿ ವಿಚಾರ ತಿಳಿಯುತ್ತಿದ್ದಂತೆ ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಪರಾರಿಯಾಗಿದ್ದಾರೆ. ಗುತ್ತಿಗೆದಾರ ಚೆನ್ನೇಗೌಡ ಹಾಗೂ ಕುಟುಂಬಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಇನ್ಸ್‌ಪೆಕ್ಟರ್‌ ಕುಮಾರ್‌ ಕಿರುಕುಳ ನೀಡುತ್ತಿದ್ದ ಆರೋಪ

ಸ್ಕೂಲ್‌ ಮಗುವಿನ ತಂದೆಗೆ ಹನಿಟ್ರ್ಯಾಪ್‌, ಸುಲಿಗೆ ಮಾಡಿದ ಬೆಂಗಳೂರಿನ ಶಿಕ್ಷಕಿ ಅರೆಸ್ಟ್‌

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಪ್ರಿ ಸ್ಕೂಲ್​ಗೆ ಬರುತ್ತಿದ್ದ ಮಗುವಿನ ತಂದೆಗೆ ಕಿಸ್‌ ಕೊಟ್ಟು ಹನಿಟ್ರ್ಯಾಪ್ ಮಾಡಿ 50 ಸಾವಿರ ರೂ. ಸುಲಿಗೆ ಮಾಡಿದ ಶಿಕ್ಷಕಿ ಬೆದರಿಕೆಯೊಡ್ಡಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ