bananti
ಕೊಪ್ಪಳ: ಬಾಣಂತಿಗೆ ಕುತ್ತು ತಂದೊಡ್ಡಿದ ಅಧಿಕ ರಕ್ತದೊತ್ತಡ
ಕೊಪ್ಪಳ: ಬಾಣಂತಿಯರ ಸಾವಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇದಕ್ಕೆ ನಾನಾ ಕಾರಣಗಳಿದ್ದರೂ ಆಗುತ್ತಿರುವ ಜೀವಹಾನಿ ಅಸಹನೀಯ. ಇಂಥ ಮತ್ತೊಂದು ಘಟನೆ ಕೊಪ್ಪಳದಲ್ಲಿ ಮಂಗಳವಾರ ಬೆಳಗಿನ ವೇಳೆ ನಡೆದಿದೆ. ಗುರುವಾರವಷ್ಟೇ ಇಲ್ಲಿನ 100 ಹಾಸಿಗೆಗಳ ತಾಯಿ-ಶಿಶು ಆಸ್ಪತ್ರೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಐಶ್ವರ್ಯ (20) ಎಂಬ ಬಾಣಂತಿ, ನಂಜು ಉಂಟಾಗಿದ್ದ ಕಾರಣಕ್ಕೆ ಸಾವನ್ನಪ್ಪಿದ್ದರು. ಮಂಗಳವಾರ ನಸುಕಿನ ವೇಳೆ ಕುಷ್ಟಗಿ ತಾಲೂಕಿನ ಆಡೂರು ಗ್ರಾಮದ ರೇಣುಕಾ ಪ್ರಕಾಶ್ ಹಿರೇಮನಿ (22)