Menu

ಬೈಲಹೊಂಗಲದಲ್ಲಿ ಮಗುವಿಗೆ ಹಿಂಸೆ ನೀಡಿ ಭೀಕರವಾಗಿ ಕೊಲೆಗೈದ ಮಲ ತಂದೆ

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಹಾರೂಗೊಪ್ಪದಲ್ಲಿ ವ್ಯಕ್ತಿಯೊಬ್ಬ ಮೂರು ವರ್ಷದ ಮಗುವನ್ನು ಕಟ್ಟಿಗೆಯಿಂದ ಹೊಡೆದು, ಎಲ್ಲೆಂದರಲ್ಲಿ ಸುಟ್ಟು ಕೊಲೆ ಮಾಡಿದ್ದಾನೆ. ಕಾರ್ತಿಕ್ ಮುಕೇಶ್ ಮಾಂಜಿ ಹತ್ಯೆಯಾದ ಮಗು. ಮಲತಂದೆ ಮಹೇಶ್ವರ್ ಮಾಂಜಿ ಸ್ನೇಹಿತರಾದ ರಾಕೇಶ್ ಮಾಂಜಿ, ಮಹೇಶ್ ಮತ್ತು ಶ್ರೀನಾಥ್ ಮಾಂಜಿ ಜೊತೆ ಸೇರಿ ಕೊಲೆ ಮಾಡಿದ್ದಾರೆ. ಮಗುವಿನ ತಾಯಿ ಮಹೇಶ್ವರ್ ಮಾಂಜಿಯನ್ನು ಎರಡನೇ ಮದುವೆಯಾಗಿ ಬಿಹಾರದಿಂದ ಬೆಳಗಾವಿಗೆ ಕೆಲಸಕ್ಕೆಂದು ಬಂದಿದ್ದರು. ತನ್ನೊಂದಿಗೆ 3 ವರ್ಷದ ಮಗ ಕಾರ್ತಿಕ್‌ನನ್ನು ಕರೆದುಕೊಂಡು ಬಂದಿದ್ದರು.