Menu

ಉತ್ತರಾಖಂಡದಲ್ಲಿ ಹಿಮಪಾತ: 42 ಕಾರ್ಮಿಕರು ಸಿಲುಕಿರುವ ಶಂಕೆ

ಉತ್ತರಾಖಂಡ್ ನ ಚಿಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಹಿಮಪಾತ ಸಂಭವಿಸಿದ್ದು, 42 ಕಾರ್ಮಿಕರು ಸಿಲುಕಿರುವ ಭೀತಿ ಇದೆ. ಭಾರತ-ಟಿಬೆಟ್ ಗಡಿ ಭಾಗದಲ್ಲಿರುವ ಮಾನಾ ಗ್ರಾಮದ ಸೇನಾ ಶಿಬಿರದ ಬಳಿ ಹಿಮಪಾತ ಸಂಭವಿಸಿದ್ದು, ಕೂಡಲೇ ರಕ್ಷಣಾ ಕಾರ್ಯ ನಡೆಸಿ 15 ಮಂದಿಯನ್ನು ರಕ್ಷಿಸಲಾಗಿದೆ. ಬದರೀನಾಥ ಜಲಾಶಯದಿಂದ ಕೇವಲ 3 ಕಿ.ಮೀ. ದೂರದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದಾಗ ರಸ್ತೆಯ ಮೇಲೆ ಹಿಮಪಾತ ಉಂಟಾಗಿದೆ. ಇದರಿಂದ ಕಾಮಗಾರಿಯಲ್ಲಿ ತೊಡಗಿದ್ದ 47 ಮಂದಿ ಸಿಲುಕಿರುವ ಶಂಕೆ ಇದೆ.