Menu

ಆಸ್ಟ್ರೇಲಿಯನ್ ಓಪನ್: ಭಾರತೀಯ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ

ವಿಶ್ವದ ಅಗ್ರಮಾನ್ಯ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತೀಯ ಮೂಲದ ನಿತಿಶ್ ಬಸವರೆಡ್ಡಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಮೆಲ್ಬೋರ್ನ್ ಕೋರ್ಟ್ ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ತಮ್ಮದೇ ಅಭಿಮಾನಿ ಆಟಗಾರನ ವಿರುದ್ಧ ಸೋಲಿನ ಭೀತಿಗೆ ಸಿಲುಕಿದ್ದರು. ಆದರೆ ಅಂತಿಮವಾಗಿ 4-6, 6-3, 6-4, 6-2 ಸೆಟ್ ಗಳಿಂದ ಗೆದ್ದು ನಿಟ್ಟುಸಿರುಬಿಟ್ಟರು. ಭಾರತೀಯ ಮೂಲದ ಅಮೆರಿಕದ 19 ವರ್ಷದ ಯುವ