arjentina
ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆದ ಅರ್ಜೆಂಟೀನಾ
ಅಮರಿಕ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಅರ್ಜೆಂಟೀನಾ ಕೂಡ ಹೊರ ಬಂದಿದೆ. ಈ ಮೂಲಕ ಅಮೆರಿಕ ಹಾದಿ ಹಿಡಿದಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಡವಿದೆ ಎಂಬ ನೆಪ ನೀಡಿ ಅರ್ಜೆಂಟೀನ ಈ ನಿರ್ಧಾರ ಕೈಗೊಂಡಿದೆ. ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುತ್ತಿರುವುದಾಗಿ ಘೋಷಿಸಿಕೊಂಡ ಎರಡು ವಾರಗಳ ನಂತರ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಈ ವಿಷಯ ತಿಳಿಸಿದ್ದಾರೆ.