Arabian Sea
ಕೊಚ್ಚಿ ಬಳಿ ಅರಬಿ ಸಮುದ್ರದಲ್ಲಿ ಮುಳುಗಿದ ಲೈಬೀರಿಯಾ ಹಡಗು, ಸಿಬ್ಬಂದಿಯ ರಕ್ಷಣೆ
ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಹಡಗು ಸಂಸ್ಥೆಗಳ ರಕ್ಷಣಾ ಕಾರ್ಯಾಚರಣೆ ಫಲ ನೀಡದೆ ಕೊಚ್ಚಿ ಕರಾವಳಿಯಿಂದ 38 ಮೈಲಿಕಲ್ ಗಳಷ್ಟು ದೂರದಲ್ಲಿ ಲೈಬೀರಿಯಾದ ಕಂಟೇನರ್ ಹಡಗು ಅರೇಬಿಯನ್ ಸಮುದ್ರದಲ್ಲಿ ಭಾನುವಾರ ಬೆಳಗ್ಗೆ ಮುಳುಗಿದೆ. ಸರಕುಗಳನ್ನು ಹೊಂದಿರುವ ಕಂಟೇನರ್‌ಗಳನ್ನು ಸಾಗಿಸುತ್ತಿದ್ದ ಹಡಗು ಶನಿವಾರ ಮಧ್ಯಾಹ್ನ ಸ್ಟಾರ್‌ಬೋರ್ಡ್ ಬದಿಗೆ 26 ಡಿಗ್ರಿಗಳಷ್ಟು ಕೆಳಮಟ್ಟಕ್ಕೆ ಇಳಿದಿತ್ತು. ಭಾರತೀಯ ಕರಾವಳಿ ಕಾವಲು ಪಡೆಯ ಮೂರು ಹಡಗುಗಳು – ಭಾರತೀಯ ನೌಕಾಪಡೆಯ INS ಸುಜಾತ,