anathkumar
ಹುಬ್ಬಳ್ಳಿಯಲ್ಲಿ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಮ್ಯೂಸಿಯಂ ಅನಾವರಣ
ಹುಬ್ಬಳ್ಳಿ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೇಂದ್ರ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕರಾಗಿದ್ದ ಅನಂತ್ ಕುಮಾರ್ ಬಳಸಿದ ಪೀಠೋಪಕರಣಗಳ ಮ್ಯೂಸಿಯಂ ಏಪ್ರಿಲ್ 28ರಂದು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದೆಹಲಿಯ ಅನಂತಕುಮಾರ್ ನಿವಾಸದಲ್ಲಿ ಇರಿಸಲಾಗಿದ್ದ ಪೀಠೋಪಕರಣಗಳನ್ನು ಹುಬ್ಬಳ್ಳಿಗೆ ತಂದು ಸುಂದರ ಮ್ಯೂಸಿಯಂ ನಿರ್ಮಿಸಲಾಗಿದೆ. ನೂರಾರು ನಾಯಕರು ಊಟ-ತಿಂಡಿ ಮಾಡಿದ ಡೈನಿಂಗ್ ಕೋಣೆ, ಹಲವಾರು ಜನರ ಸಮಸ್ಯೆಗಳನ್ನು ಪರಿಹಾರ ಮಾಡಿ ಅನುಕೂಲ ಮಾಡಿ ಕೊಟ್ಟ ಗೃಹ ಕಚೇರಿ, ಕರ್ನಾಟಕ ಅಷ್ಟೇ ಅಲ್ಲ