Wednesday, August 26, 2026
Menu

ಕೆಕೆಆರ್ ತಂಡಕ್ಕೆ ರಾಹನೆ ನಾಯಕ, ವೆಂಕಟೇಶ್ ಉಪನಾಯಕ!

ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಅಜಿಂಕ್ಯ ರಹಾನೆ ನಾಯಕ ಮತ್ತು ವೆಂಕಟೇಶ್ ಅಯ್ಯರ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಐಪಿಎಲ್ ಟಿ-೨೦ ಟೂರ್ನಿಯ 2025ರ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಕಳೆದ ಕೆಲವು ಆವೃತ್ತಿಗಳಿಂದ ಫ್ರಾಂಚೈಸಿಗಳು ಕಡೆಗಣಿಸಿದ್ದ ರಹಾನೆಗೆ ಮಣೆ ಹಾಕಿ ಅಚ್ಚರಿ ಮೂಡಿಸಿದೆ. ರಹಾನೆ ಅವರ ಅನುಭವ ಹಾಗೂ ಪ್ರಬುದ್ಧತೆ ಆಧರಿಸಿ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೆಕೆಆರ್ ಫ್ರಾಂಚೈಸಿ ಹೇಳಿದೆ. ಕೆಕೆಆರ್ ತಂಡ