acussed arrest
ಕಾನೂನು ಪದವಿ ಪ್ರಶ್ನೆಪತ್ರಿಕೆ ಲೀಕ್: ಉಪಪ್ರಾಂಶುಪಾಲ ಸೇರಿ ಮೂವರು ಸೆರೆ
ಕಾನೂನು ಪದವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕೋಲಾರದ ಬಸವ ಶ್ರೀ ಕಾನೂನು ವಿಶ್ವವಿದ್ಯಾಲಯದ ಉಪಪ್ರಾಂಶುಪಾಲ ಡಾ. ನಾಗರಾಜ್, ವರುಣ್ ಮತ್ತು ಜಗದೀಶ್ ಎಂಬವರನ್ನು ಬಂಧಿಸಿದ್ದಾರೆ. ಜನವರಿ 22ರಂದು ನಡೆಯಬೇಕಿದ್ದ ಕಾನೂನು ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಸೋರಿಕೆಯಾದ ಪ್ರಶ್ನೆಪತ್ರಿಕೆ ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಹರಿದಾಡಿತ್ತು. ಈ ಸಂಬಂಧ ಬೆಂಗಳೂರಿನ ಸಿಸಿಬಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ
ಕೊಟ್ಟಿಗೆಯಿಂದ ಕರು ಕದ್ದು ಬಾಡೂಟ ಮಾಡಿದವರ ಬಂಧನ
ಹಾಸನದ ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದಲ್ಲಿ ಕೊಟ್ಟಿಗೆಯಿಂದ ಕರುವೊಂದನ್ನು ದುಷ್ಕರ್ಮಿಗಳು ಕದ್ದು ಬಾಡೂಟ ಮಾಡಿದ್ದು, ಈ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಹೂವಣ್ಣ ಎಂಬವರಿಗೆ ಸೇರಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದು ಕಡಿದು ಮಾಂಸದೂಟ ಮಾಡಿದ್ದಾರೆ. ಕರುವಿಗಾಗಿ ಹುಡುಕಾಟ