Menu

Accident Death-ಗದಗದಲ್ಲಿ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿ ಸವಾರ ಸಾವು

ಗದಗ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದ ವೇಳೆ ಓವರ್ ಸ್ಪೀಡ್‌ ಕಾರಣ ಡಿವೈಡರ್‌ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾನಗಲ್ ತಾಲೂಕಿನ ದ್ಯಾಮನಕೊಪ್ಪ ನಿವಾಸಿ ಗಣೇಶ ಸೋಮಪ್ಪ ನ್ಯಾರಲಘಂಟಿ (36) ಮೃತ ಯುವಕ. ಬೈಕ್‌ನಲ್ಲಿ ಹಿಂದೆ ಕೂತಿದ್ದ ಮಹಿಳೆ, ವೃದ್ಧ ಹಾಗೂ 4 ವರ್ಷದ ಮಗು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಬೈಕ್‌ನಲ್ಲಿ

Accident Death-ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಮಹಿಳೆ ಸಾವು

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಹಿಂಬದಿ ಸವಾರ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೇಷ್ಮೆ ಸಂಸ್ಥೆ ಮೆಟ್ರೋ ಸ್ಟೇಷನ್ ಬಳಿ ನಡೆದ ಈ ದುರಂತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್. ಮಾರ್ಕೆಟ್‌ನಿಂದ ಹಂಚಿಪುರ ಕಾಲೋನಿಗೆ ತೆರಳುತ್ತಿದ್ದ

Accident death-ಶಿವಮೊಗ್ಗದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಶಿವಮೊಗ್ಗದ ಬೇಡರ ಹೊಸಹಳ್ಳಿ ಕ್ರಾಸ್ ನಲ್ಲಿ ಸೋಮವಾರ ರಾತ್ರಿ ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ತೆರಳುತ್ತಿದ್ದ ಬೈಕ್‌ ಸವಾರನಿಗೆ ಅಪರಿಚ ವಾಹನವೊಂದು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಚಿನ್ (25) ಮೃತ ಯುವಕ. ಡಿಕ್ಕಿ ಹೊಡೆದ ವಾಹನವನ್ನು

Accident death: ಶಿವಮೊಗ್ಗದಲ್ಲಿ ರಸ್ತೆ ಅಪಘಾತ: ಶಿಕ್ಷಕ ಸ್ಥಳದಲ್ಲೇ ಸಾವು

  ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಶಿವಮಂದಿರ ಸಮೀಪ ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರು ಸ್ಥಳದಲ್ಲಿಯೇ ಅಸು ನೀಗಿದ್ದಾರೆ. ಅರಸಾಳು ಗ್ರಾಮದ ನಿವಾಸಿ ಮಂಜಯ್ಯ.ಟಿ (59) ಮೃತಪಟ್ಟವರು. ಅವರು ಕೋಟೆತಾರಿಗ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

Accident Death: ಇಳಕಲ್‌ನಲ್ಲಿ ಬೈಕ್‌ಗೆ ಬಸ್‌ ಡಿಕ್ಕಿ: ಯುವಕ ಸಾವು

ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲೂಕಿನ ಗುಡಿಸಂಕಾಪುರ ಗ್ರಾಮದ ಬಳಿ ಬೈಕ್‌ಗೆ ಬಸ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಂಬಲದಿನ್ನಿ ಗ್ರಾಮದ ನಿವಾಸಿ ರಾಜು ಬಡಿಗೇರ (27) ಮೃತಪಟ್ಟ ಯುವಕ. ಸ್ಥಳಕ್ಕೆ ಇಳಕಲ್‌ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ

Accident Death: ಬ್ಯಾಟರಾಯನಪುರದಲ್ಲಿ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ

ಬೆಂಗಳೂರು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲಿ ನೈಸ್ ರಸ್ತೆ ಪ್ರವೇಶಿಸುವ ಬಳಿ ಬೈಕ್ ಗೆ ಸಿಮೆಂಟ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರೇಣುಕಾ ಎಂಬವರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಬಸವೇಶ್ವರ ನಗರ ಬಿಡಿಎ ನಿವಾಸಿ ರೇಣುಕಾ(52) ಮೃತಪಟ್ಟವರು. ಅವರು ಮಗಳು

ದೊಡ್ಡಬಳ್ಳಾಪುರದಲ್ಲಿ ಗೃಹಪ್ರವೇಶದ ಅಡುಗೆಗೆ ಬಂದಿದ್ದ ಬಾಲಕ ಸಾವು

ದೊಡ್ಡಬಳ್ಳಾಪುರ ನಗರದ ಜಾಲಪ್ಪ ಕಾಲೇಜು ರಸ್ತೆಯ ಅಶ್ವತ್ಥಪ್ಪನವರ ಮನೆ ಬಳಿ ಗೃಹಪ್ರವೇಶದ ಅಡುಗೆ ಕೆಲಸಕ್ಕೆ ಬಂದಿದ್ದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗರೇ ಕಾಲುವೆ ನಿವಾಸಿ ಹೇಮಂತ (17)ಮೃತ ಬಾಲಕ. ಶಾಮಿಯಾನ ಬಿಚ್ಚಲು ಹೋಗಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ಶಂಕೆ

Accident Death: ಕೆಆರ್‌ ಪೇಟೆಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಹರಿದು ವ್ಯಕ್ತಿ ಸಾವು

ಶ್ರೀನಿವಾಸಪುರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುತ್ತಿದ್ದ ಡಬಲ್ ಟ್ರ್ಯಾಲಿ ಟ್ರ್ಯಾಕ್ಟರ್ ಹರಿದು ಸೈಕಲ್‌ ಸವಾರ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಆನೆಗೊಳ ಚಿಕ್ಕತರಹಳ್ಳಿ ಗ್ರಾಮದ ಈರಪ್ಪ(55) ಮೃತಪಟ್ಟಿದ್ದಾರೆ. ಚಾಲಕ ಸಂಚಾರ ನಿಯಮ ಮೀರಿ ಡಬಲ್ ಟ್ರ್ಯಾಲಿ ಅಳವಡಿಸಿಕೊಂಡಿದ್ದು, ಕೆಲಸ ಮುಗಿಸಿ ಸೈಕಲ್‌ನಲ್ಲಿ

Accident death: ಬೀದರ್‌ನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿ ಸಾವು

ಬೀದರ್‌ನ ಹುಮನಾಬಾದ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು 31 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಲ್ಬುರ್ಗಿಯಿಂದ ಬೀದರ್‌ಗೆ ಸಂಚರಿಸುತ್ತಿದ್ದ ಲೋಕಲ್ ರೈಲಿನಲ್ಲಿ ಈ ದುರಂತ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕಲ್ಬುರ್ಗಿಯ ಬಸವನಗರ ನಿವಾಸಿ ವಿಜಯಾನಂದ (31) ಎಂದು ಗುರುತಿಸಲಾಗಿದೆ.

ನೆಲಮಂಗಲದಲ್ಲಿ ಬಿಎಂಟಿಸಿ ಬಸ್‌ ಹಿಟ್ ಆ್ಯಂಡ್ ರನ್: ಬೈಕ್ ಸವಾರ ಸಾವು

ನೆಲಮಂಗಲ ಬಳಿಯ ಬಿನ್ನಮಂಗಲ ಅರಿಶಿನಕುಂಟೆ ಗ್ರಾಮದಲ್ಲಿ ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಚಾಲಕ ಬಸ್‌ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಬೈಕ್‌ ಸವಾರ ರವಿಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಹಿಂಬದಿಯಲ್ಲಿ ಕೂತಿದ್ದ ಸವಿತಾ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರವಿಚಂದ್ರ ಮಗಳ ಹುಟ್ಟು ಹಬ್ಬಕ್ಕೆ