ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಾಳೆ ಇರ್ತಿನೋ ಇಲ್ವೋ, ಏನ್ ಮಾಡ್ತಿನೋ ಗೊತ್ತಿಲ್ಲ ಎಂದು ರೀಲ್ಸ್ ಮಾಡಿದ್ದ ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ಮೃತಪಟ್ಟಿದ್ದಾರೆ. ಭಾನುವಾರ ರೀಲ್ಸ್ ಮಾಡಿದ್ದ ಸ್ವಾಮೀಜಿ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ವಾಮೀಜಿ ಮುಳುಗಿ ಚೀರಾಡುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಇರದ ಕಾರಣ ಗಂಗಾವತಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಕರೆದುಕೊಂಡು ಹೋಗುತ್ತಿರುವಾಗ ಡೋ ಹೋಗೋ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಮೂರು ಜನ ಸ್ನೇಹಿತರೊಂದಿಗೆ ಲಕ್ಷ್ಮಯ್ಯ ಕೊಪ್ಪಳ ಜಿಲ್ಲೆಗೆ ಬಂದಿದ್ದರು. ಹುಲಿಗೆಮ್ಮ ದೇವಸ್ಥಾನಕ್ಕೆ ಬಂದಿದ್ದ ಲಕ್ಷ್ಮಯ್ಯ ಸ್ವಾಮೀಜಿ ರೀಲ್ಸ್ ಮಾಡಿದ್ದರು.
ಆನೆಗೊಂದಿ ಬಳಿ ಇರೋ ತುಂಗಭದ್ರಾ ನದಿಗೆ ಸ್ನಾನಕ್ಕೆ ಹೋಗಿದ್ದ ಲಕ್ಷ್ಮಯ್ಯ ಸ್ವಾಮೀಜಿ, ದೆವ್ವ ಬಿಡಿಸಲು ಆನೆಗೊಂದಿಗೆ ಬಂದಿದ್ದರು ಎಂದು ಹೇಳಲಾಗಿದೆ. ಗೆಳೆಯರ ಮನೆಗೆ ಬಂದಿದ್ದೆವು ಎಂದು ಸ್ವಾಮೀಜಿ ಸ್ನೇಹಿತರು ತಿಳಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
ಪ್ರೇಯಸಿ ನಂಬರ್ ಬ್ಲಾಕ್ ಮಾಡಿದ್ದಕ್ಕೆ ನೊಂದ ವಿದ್ಯಾರ್ಥಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದ್ದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರೇಯಸಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ.
ವಯನಾಡು ಮೂಲದ ಮೊಹಮ್ಮದ್ ಶಬ್ಬೀರ್ (26) ಆತ್ಮಹತ್ಯೆ ಮಾಡಿಕೊಂಡಿದ್ದ. ಸಂಸದ ಸುಧಾಕರ್ ಅವರದೆನ್ನಲಾದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಎನ್ನಲಾಗಿದೆ. ಆರ್‌ಸಿಟಿ ಅಲೈಡ್ ಸೈನ್ಸ್ ಕೋರ್ಸ್‌ನ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಹಾಸ್ಟೆಲ್‌ನ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ರೂಮ್‌ನ ಕಿಟಕಿಗೆ ಟವೆಲ್ ಕಟ್ಟಿ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಪೇರೇಸಂದ್ರ ಠಾಣಾ ಪೊಲೀಸರು ರೂಮ್ ಪರಿಶೀಲನೆ ನಡೆಸಿದಾಗ ಡೆತ್‌ನೋಟ್ ಸಿಕ್ಕಿದೆ.ಶಬ್ಬೀರ್ ತನ್ನ ಸಹಪಾಠಿಯೊಬ್ಬಳನ್ನು ಲವ್ ಮಾಡುತ್ತಿದ್ದ. ಕೆಲವು ದಿನಗಳಿಂದ ಮೃತ ಶಬ್ಬೀರ್‌ನ ಪೋನ್ ನಂಬರ್‌ನ್ನು ಆ ಹುಡುಗಿ ಬ್ಲಾಕ್ ಮಾಡಿದ್ದಳಂತೆ. ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲವಂತೆ. ಹೀಗಾಗಿ ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.