ಹೆಂಡತಿಯನ್ನು ವಶೀಕರಣ ಮಾಡಿಕೊಂಡು, ತನಗೆ ಡಿವೋರ್ಸ್ ಕೊಡುವಂತೆ ಮಾಡಿ. ತನ್ನ ಕುಟುಂಬ ಹಾಳಾಗಲು ಸ್ವಯಂಘೋಷಿತ ದೇವಮಾನವ ಕಾರಣವೆಂದು ಆತನನ್ನು ಅಪಹರಿಸಿ ಕೊಲೆಗೈದ ಘಟನೆ ನೋಯ್ಡಾದಲ್ಲಿ ನಡೆದಿದೆ.
ಪೊಲೀಸರು ಹೆದ್ದಾರಿ ಬಳಿ ಅತಿವೇಗದಲ್ಲಿ ಬಂದ ಕಾರನ್ನು ಪೊಲೀಸರು ನಿಲ್ಲಿಸಲು ಹೇಳಿದರೂ ನಿಲ್ಲಿಸದಿದ್ದಾಗ ಕಾರನ್ನು ಪೊಲೀಸರು ಬೆನ್ನಟ್ಟಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿದ್ದವರ ಮೇಲೆ ಗುಂಡು ಹಾರಿಸಿ ನಿಲ್ಲಿಸಿದ್ದಾರೆ. ಕಾರನ್ನು ಪರಿಶೀಲನೆ ನಡೆಸಿದಾಗ ಕೇಸರಿ ಬಟ್ಟೆ ಮತ್ತು ಆಯುಧಗಳು ಪತ್ತೆಯಾಗಿವೆ. ಇದನ್ನು ಆಧರಿಸಿ ಸ್ವಯಂಘೋಷಿತ ದೇವಮಾನವನ ಕೊಲೆ ಪ್ರಕರಣದಲ್ಲಿ ಕಾರಿನಲ್ಲಿದ್ದ 5 ಆರೋಪಿಗಳನ್ನು ಬಂಧಿಸಲಾಗಿದೆ.
ಕೊಲೆಯಾಗಿರುವ ದೇವಮಾನವ ನರೇಶ್ ಪ್ರಜಾಪತಿ ತನ್ನ ಹೆಂಡತಿಯನ್ನು ವಶೀಕರಣ ಮಾಡಿಕೊಂಡಿದ್ದಾನೆ. ಆತನೇ ವಿಚ್ಛೇದನಕ್ಕೆ ಕಾರಣ ಎಂದು ಆರೋಪಿಸಿ ಪ್ರವೀಣ್ ಶರ್ಮಾ ಹಾಗೂ ಸ್ನೇಹಿತರು ಸೇರಿ ಕೊಲೆ ಮಾಡಿದ್ದಾರೆ. ಮಾಂತ್ರಿಕ ನರೇಶ್ ರೋಜಾ ಜಲಾಲ್ಪುರದ ನಿವಾಸಿ. ನೀರಜ್, ಸುನಿಲ್, ಸೌರಭ್ ಕುಮಾರ್, ಪ್ರವೀಣ್ ಶರ್ಮಾ ಮತ್ತು ಪ್ರವೀಣ್ ಮಾವಿ ಕೊಲೆ ಆರೋಪಿಗಳು.
ಕೆಲವು ದಿನಗಳ ಹಿಂದೆ ಸ್ವಾಮೀಜಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಬುಲಂದ್‌ಶಹರ್‌ನ ಕಾಲುವೆಯೊಂದರಲ್ಲಿ ಎಸೆಯಲಾಗಿತ್ತು. ಪ್ರವೀಣ್ ಶರ್ಮಾ ಹೆಂಡತಿ ನರೇಶ್ ಪ್ರಜಾಪತಿಯ ಬಳಿ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸಲಹೆ ಪಡೆಯಲು ಹೋಗುತ್ತಿದ್ದಳು. ಇತ್ತೀಚೆಗೆ ಪ್ರವೀಣ್‌ನಿಂದ ವಿಚ್ಛೇದನ ಪಡೆದಿದ್ದಳು. ತನ್ನ ಕುಟುಂಬ ಒಡೆಯಲು ನರೇಶ್ ಪ್ರಜಾಪತಿಯೇ ಕಾರಣ ಎಂದು ಪ್ರವೀಣ್ ಶರ್ಮಾ ತಿಳಿದುಕೊಂಡಿದ್ದ.
ಮಹಾರಾಜ್ ಎಂಬ ಹೆಸರಿನ ಖಾನ್ ಎಂಬಾತ ಇಬ್ಬರು ಆರೋಪಿಗಳನ್ನು ಪ್ರವೀಣ್‌ಗೆ ಪರಿಚಯಿಸಿದ್ದನು. ನರೇಶ್ ಪ್ರಜಾಪತಿಯನ್ನು ಕೊಲ್ಲಲು ಸಹಾಯ ಮಾಡಿದರೆ ಭೂಮಿ ಮತ್ತು ಐಷಾರಾಮಿ ಕಾರುಗಳನ್ನು ನೀಡುವುದಾಗಿ ಪ್ರವೀಣ್ ಭರವಸೆ ನೀಡಿದ್ದನು. ಈ ಗುಂಪು ಪೂಜಾ ವಿಧಿಗಳನ್ನು ಮಾಡುವ ನೆಪದಲ್ಲಿ ನರೇಶ್ ಪ್ರಜಾಪತಿಯನ್ನು ಸಂಪರ್ಕಿಸಿದೆ. ಆಗಸ್ಟ್ 2 ರಂದು ವಾಹನದಲ್ಲಿ ಕರೆತಂದು ಜನಸಂಚಾರವಿಲ್ಲದ ಸ್ಥಳದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಕಾಲುವೆಯಲ್ಲಿ ಎಸೆದಿದ್ದರು.