Saturday, February 01, 2025
Menu

ಮಧ್ಯಮ ವರ್ಗಕ್ಕೆ ಸರ್ ಪ್ರೈಸ್ ಗಿಫ್ಟ್ : ಬಸವರಾಜ ಬೊಮ್ಮಾಯಿ

ನವದೆಹಲಿ: ಕೇಂದ್ರದ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಸರಪ್ರೈಸ್ ಗಿಫ್ಟ್ ಕೊಟ್ಟಿದ್ದು, ಇದರಿಂದ ಮಧ್ಯಮ ವರ್ಗದವರ ಉಳಿತಾಯ ಹೆಚ್ಚಲಿದೆ. ಇದೊಂದು ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಂಡಿರುವ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರದ ಬಜೆಟ್ ಮಂಡನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ದೂರದೃಷ್ಟಿಯ ವಿಕಸಿತ ಭಾರತ 2047 ರ ಅಡಿಗೆ ತೆಗೆದುಕೊಂಡು ಹೋಗುವ ಅಭಿವೃದ್ಧಿ ಪರವಾಗಿರುವ ಬಜೆಟ್. ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗೆ ಸಮತೋಲನ ತೆಗೆದುಕೊಂಡು ಹೋಗುವ ಬಜೆಟ್. ಆತ್ಮನಿರ್ಭರ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಹೇಳಿದರು.

ಮಧ್ಯಮವರ್ಗದ ಜನರ ನಿರೀಕ್ಷೆಗಳಿಗೆ ಬೂಸ್ಟ್ ನೀಡಿದೆ. ಮದ್ಯಮ ವರ್ಗದ ಉಳಿತಾಯ ಹೆಚ್ಚಿಸಿದೆ. ಇದೊಂದು ಮಧ್ಯಮ ವರ್ಗದವರಿಗೆ ಸರ್ಪ ರೈಸ್ ಗಿಫ್ಟ್‌. ಎಲ್ಲರೂ 10 ಲಕ್ಷ ತೆರಿಗೆ ವಿನಾಯಿತಿ ನಿರೀಕ್ಷೆ ಮಾಡಿದ್ದರು. ಆದರೆ, ಪಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿ ಸರ್ಪರೈಸ್ ಗಿಫ್ಟ್ ನೀಡಿದ್ದಾರೆ ಎಂದರು.

ಅಭಿವೃದ್ಧಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಬಡವರು. ರೈತರು, ಮಹಿಳೆಯರು, ಯುವಕರು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ದುಡಿಯುವ ಕೈಗಳಿಗೆ ವಿಪುಲವಾದಂತ ಅವಕಾಶ ಕೊಟ್ಟಿರುವ ಬಜೆಟ್. ತನ್ನದೇ ತಾಂತ್ರಿಕತೆಗೆ ಸಂಶೋಧನೆಗೆ ವಿಶೇಷವಾಗಿ ಕೃಷಿಯನ್ನು ಆತ್ಮ ನಿರ್ಭರ ಮಾಡುವ ಬಜೆಟ್. ಯೂರಿಯಾ ಗೊಬ್ಬರ, ಬೀಜ, ಉತ್ಪಾದನೆಯಲ್ಲಿ ನಾವು ಸಂಪೂರ್ಣವಾಗಿ ಆತ್ಮನಿರ್ಭರವಾಗಲು ಅವಕಾಶ ನೀಡಲಾಗಿದೆ. ಹಳ್ಳಿಗಾಡಿನಲ್ಲಿ ಸ್ವಯಂ ಉದ್ಯೋಗವಕಾಶ, ಹಳ್ಳಿಗಳಿಂದ ಶಹರಕ್ಕೆ ಹೋಗುವುದನ್ನು ತಡೆಯಲಯ ಕ್ರಮ. ರೈಲ್ವೆ, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಆರೋಗ್ಯ ವಲಯದಲ್ಲಿ ಕ್ಯಾನ್ಸ‌ರ್ ನಿಯಂತಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ರಾಜ್ಯಗಳಿಗೆ 1.5 ಲಕ್ಷ ಕೋಟಿ ರೂ. 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಘೋಷಿಸಲಾಗಿದ್ದು, ಇದರಿಂದ ಕರ್ನಾಟಕಕ್ಕೂ 7ರಿಂದ 8 ಸಾವಿರ ಕೋಟಿ ರೂ. ಸಾಲ ದೊರೆಯುವ ಸಾಧ್ಯತೆ ಇದೆ. ಅಭಿವೃದ್ಧಿ ಪರ ಬಜೆಟ್, ಆದ್ದರಿಂದ 2025-26 ರ ಹೊತ್ತಿಗೆ ಶೇ 7 ರಿಂದ 8 ರ ವರೆಗೆ ಜಿಡಿಪಿ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ತೆರಿಗೆಯಲ್ಲಿ ಬಹಳ ಸರಳೀಕರಣ ಮಾಡಲಾಗಿದೆ. ಕಸ್ಟಮ್ಸ್ ನಲ್ಲಿ ಸರಳಿಕರಣ ಮಾಡಲಾಗಿದೆ. ವಿಶೇಷವಾಗಿರುವ ಕ್ಯಾನ್ಸರ್, ಎಲೆಕ್ಟ್ರಾನಿಸ್, ಮೆಡಿಕಲ್ ಸೈನ್ಸನ್, ನವ ತಂತಜ್ಞಾನಕ್ಕೆ ಬಹಳಷ್ಟು ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *