Menu

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಸುರೇಶ್ ಗೋಪಿ

suresh gopi

ಕೊಚ್ಚಿ: ಮಲಯಾಳಂ ಚಿತ್ರರಂಗದ ಖ್ಯಾತ ನಟ ಹಾಗೂ ಬಿಜೆಪಿ ಸಂಸದ ಸುರೇಶ್‌ ಗೋಪಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿರುವ ಗೋಪಿ ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಸದಾನಂದನ್‌ ಮಾಸ್ಟರ್‌ ಅವರನ್ನು ತಮಗೆ ಬದಲಿಯಾಗಿ ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಸಹಾಯಕ ಸಚಿವರಾಗಿರುವ ಸುರೇಶ್‌ ಗೋಪಿ ಉತ್ತರ ಕಣ್ಣೂರು ಭಾಗದಲ್ಲಿ ಪಕ್ಷದ ಉತ್ತಮ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಸದಾನಂದನ್‌ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸುರೇಶ್‌ ಗೋಪಿ, ಕೆಂದ್ರ ಸಚಿವ ಸ್ಥಾನಕ್ಕೆ ನನ್ನ ಸ್ಥಾನಕ್ಕೆ ನಿಮ್ಮನ್ನು ಆಯ್ಕೆ ಮಾಡಲು ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.

ನನ್ನ ಬದಲು ಸದಾನಂದನ್‌ ಅವರನ್ನು ಕೇಂದ್ರ ಸಚಿವ ಸ್ಥಾನಕ್ಕೆ ನೇಮಕ ಮಾಡಿದರೆ ಕೇರಳ ರಾಜ್ಯ ರಾಜಕೀಯ ಇತಿಹಾಸದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಸಚಿವನಾಗಬೇಕು ಎಂದು ಬಯಸಿರಲೇ ಇಲ್ಲ. ನಾನು ಚಿತ್ರರಂಗ ತೊರೆದು ಸಚಿವನಾದ ಮೇಲೆ ನನ್ನ ಆದಾಯ ಕುಸಿಯುತ್ತಾ ಬಂದಿದೆ. ನನ್ನ ಆದಾಯದ ಕಡೆಗೂ ನಾನು ಗಮನ ಹರಿಸಬೇಕಾಗಿದೆ ಎಂದು ಗೋಪಿ ಹೇಳಿದರು.

ಕೇರಳ ಜನತೆ ಬಿಜೆಪಿಗೆ ನೀಡಿದ ಬೆಂಬಲ ಗೌರವಿಸಲು ನನಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಆದರೆ ನನಗೆ ಇದರಲ್ಲಿ ಹೆಚ್ಚು ಆಸಕ್ತಿ ಇಲ್ಲ ಎಂದು 2016ರಲ್ಲಿ ಬಿಜೆಪಿಗೆ ಸೇರಿದ ಬೆನ್ನಲ್ಲೇ ಸಂಸದರಾಗಿ ಆಯ್ಕೆಯಾಗಿದ್ದೂ ಅಲ್ಲದೇ ಮೊದಲ ಪ್ರಯತ್ನದಲ್ಲೇ ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಇದರಿಂದ ಗೋಪಿ ಅತ್ಯಂತ ಕಿರಿಯ ವಯಸ್ಸಿಗೆ ಸಚಿವ ಸ್ಥಾನ ಅಲಂಕರಿಸಿದ ಸಾಧನೆ ಮಾಡಿದ್ದರು.

Related Posts

Leave a Reply

Your email address will not be published. Required fields are marked *