Menu

ವಿಚ್ಛೇದಿತ ಪತ್ನಿಗೆ ತಿಂಗಳಿಗೆ 50,000 ರೂ. ಶಾಶ್ವತ ಜೀವನಾಂಶ ನೀಡುವಂತೆ ಪತಿಗೆ ಸುಪ್ರೀಂ ಆದೇಶ

ವಿವಾಹವಾಗದೆ ಉಳಿದ ವಿಚ್ಛೇದಿತ ಪತ್ನಿಗೆ ತಿಂಗಳಿಗೆ 50,000 ರೂ.ಗಳನ್ನು ಶಾಶ್ವತ ಜೀವನಾಂಶವನ್ನಾಗಿ ನೀಡಬೇಕೆಂದು ಪತಿಗೆ ಸುಪ್ರೀಂಕೋರ್ಟ್‌ ಆದೇಶಿಸಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ 5% ಹೆಚ್ಚಳ ಮಾಡಬೇಕು ಎಂದೂ ಹೇಳಿದೆ.

ಪ್ರಕರಣವೊಂದರ ವಿಚಾರಣೆ ವೇಳೆ, ಮನೆಯ ಆಸ್ತಿಯ ಪತ್ರವನ್ನು ಪತ್ನಿಗೆ ವರ್ಗಾಯಿಸುವಂತೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಪತಿಯು ಮನೆ ಮೇಲೆ ತೆಗೆದುಕೊಂಡ ಅಡಮಾನವನ್ನು ಪುನಃ ಪಡೆದುಕೊಳ್ಳಲು ಮತ್ತು ಪತ್ರವನ್ನು ತನ್ನ ಹಿಂದಿನ ಪತ್ನಿಯ ಹೆಸರಿಗೆ ವರ್ಗಾಯಿಸಲು ಕಲ್ಕತ್ತಾ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್  ಪುರಸ್ಕರಿಸಿದೆ.

ತನ್ನ ಹೆಂಡತಿ ಮತ್ತು ಮಗನಿಗೆ ಜೀವನಾಂಶವನ್ನು ಪಾವತಿಸುವ ಅಂಶವನ್ನು ವ್ಯಕ್ತಿ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು. ಪ್ರಕರಣದ ಸತ್ಯಾಸತ್ಯತೆಗಳನ್ನು ಆಲಿಸಿ ವಿಶ್ಲೇಷಿಸಿದ ನಂತರ, ಸುಪ್ರೀಂಕೋರ್ಟ್, ಮಗನಿಗೆ ಜೀವನಾಂಶ ಪಾವತಿಸಲು ನಿರ್ದೇಶಿಸಲು ಸಾಧ್ಯವಿಲ್ಲವಾದರೂ, ಮಗನಿಗೆ ಪೂರ್ವಜರ ಅಥವಾ ಇತರ ಆಸ್ತಿಯ ಮೇಲಿನ ಯಾವುದೇ ಹಕ್ಕನ್ನು ಕಾನೂನಿನ ಪ್ರಕಾರ ತಡೆಯಲು ಸಾಧ್ಯವಿಲ್ಲ ಎಂದಿದೆ. ಹೆಂಡತಿಗೆ ಹೆಚ್ಚಿನ ಜೀವನಾಂಶವನ್ನು ಪಾವತಿಸುವ ಬಗ್ಗೆ ಪತಿಯ ಆಕ್ಷೇಪಣೆಗಳನ್ನು ನಿರಾಕರಿಸಿದೆ.

ದಾಖಲೆಗಳನ್ನು ಪರಿಗಣಿಸಿದ ನಂತರ, ಹೈಕೋರ್ಟ್ ನಿಗದಿಪಡಿಸಿದ ಶಾಶ್ವತ ಜೀವನಾಂಶದ ಪ್ರಮಾಣವನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಭಾವಿಸುತ್ತೇವೆ. ಗಂಡನ ಆದಾಯ, ಆರ್ಥಿಕ ಬಹಿರಂಗಪಡಿಸುವಿಕೆಗಳು ಮತ್ತು ಹಿಂದಿನ ಗಳಿಕೆಗಳು ಅವನು ಹೆಚ್ಚಿನ ಮೊತ್ತವನ್ನು ಪಾವತಿಸುವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ತಿಳಿಸುತ್ತವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಈ ಪ್ರಕರಣದಲ್ಲಿ ಮದುವೆಯಾಗಿ 10 ವರ್ಷಗಳ ನಂತರ ಜುಲೈ 2008ರಲ್ಲಿ ಪತ್ನಿಯಿಂದ ಕ್ರೌರ್ಯ ಎಂದು ಆರೋಪಿಸಿ ಮೊಕದ್ದಮೆ ದಾಖಲಿಸಿದ್ದರು. ಪತ್ನಿ ತನಗೆ ಮತ್ತು ಅಪ್ರಾಪ್ತ ವಯಸ್ಕ ಮಗನಿಗೆ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. 2010ರ ಜನವರಿ 14 ರಂದು ವಿಚಾರಣಾ ನ್ಯಾಯಾಲಯವು ಪತ್ನಿಗೆ ತಿಂಗಳಿಗೆ 8,000 ರೂ. ಮಧ್ಯಂತರ ಜೀವನಾಂಶ ಮತ್ತು ಮೊಕದ್ದಮೆ ವೆಚ್ಚಕ್ಕಾಗಿ 10,000 ರೂ. ನೀಡಬೇಕು ಎಂದು ಆದೇಶಿಸಿತ್ತು.

ಬೇಸತ್ತ ಪತಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. 2015ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ತಿಂಗಳಿಗೆ 15,000 ರೂ. ಮಧ್ಯಂತರ ಜೀವನಾಂಶವನ್ನು ಪತ್ನಿಗೆ ಪಾವತಿಸಲು ಪತಿಗೆ ನಿರ್ದೇಶನ ನೀಡಿತು. 2016 ರಲ್ಲಿ ಪ್ರತಿವಾದಿ ಪತಿ ಕ್ರೌರ್ಯವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಹೇಳಿ ವಿಚಾರಣಾ ನ್ಯಾಯಾಲಯವು ವೈವಾಹಿಕ ಮೊಕದ್ದಮೆಯನ್ನು ವಜಾಗೊಳಿಸಿತು. ಪತಿ ಮಾಸಿಕ 69,000 ರೂ. ನಿವ್ವಳ ವೇತನವನ್ನು ಪಡೆಯುತ್ತಿದ್ದಾರೆ ಎಂದು ಹೈಕೋರ್ಟ್ ಗಮನಿ ಮಧ್ಯಂತರ ನಿರ್ವಹಣೆಯನ್ನು ತಿಂಗಳಿಗೆ 20,000 ರೂ.ಗೆ ಹೆಚ್ಚಿಸಿತು. 2019ರಲ್ಲಿ ಹೈಕೋರ್ಟ್ ಪತಿಯ ಮೇಲ್ಮನವಿಯನ್ನು ಅಂಗೀಕರಿಸಿ, ದಂಪತಿಗೆ ವಿಚ್ಛೇದನ ನೀಡಿತು.

2023ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಪತ್ನಿಗೆ ನೀಡಲಾಗುವ ಶಾಶ್ವತ ಜೀವನಾಂಶವನ್ನು ಹೆಚ್ಚಿಸುವ ಪ್ರಶ್ನೆಗೆ ಸೀಮಿತವಾದ ನೋಟಿಸ್ ನೀಡಿತು. ಪತಿಯ ಅನುಪಸ್ಥಿತಿ ಗಮನಿಸಿದ ಸುಪ್ರೀಂ ಕೋರ್ಟ್, ನವೆಂಬರ್ 1, 2023 ರಿಂದ ಜಾರಿಗೆ ಬರುವಂತೆ ಮಾಸಿಕ ಜೀವನಾಂಶವನ್ನು ರೂ. 75,000 ಕ್ಕೆ ಹೆಚ್ಚಿಸಿತು. ನಂತರ ಪತಿ ನ್ಯಾಯಾಲಯಕ್ಕೆ ಹಾಜರಾಗಿಮಧ್ಯಂತರ ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿಯನ್ನು ಸಲ್ಲಿಸಿದರು.

2025ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಅಂತಿಮ ತೀರ್ಪಿನಲ್ಲಿ ಪತ್ನಿಗೆ ಶಾಶ್ವತ ಜೀವನಾಂಶವಾಗಿ ತಿಂಗಳಿಗೆ 50,000 ರೂ.ಗಳನ್ನು ಪಾವತಿಸಲು ಆದೇಶಿಸಿ ಎರಡು ವರ್ಷಗಳಿಗೊಮ್ಮೆ ಇದರಲ್ಲಿ ಶೇ. 5 ರಷ್ಟು ಹೆಚ್ಚಳ ಆಗಬೇಕು ಎಂದೂ ತಿಳಿಸಿತು.

Related Posts

Leave a Reply

Your email address will not be published. Required fields are marked *