Menu

ಕರ್ನಾಟಕದ ಹನಿಟ್ರ್ಯಾಪ್‌ ತನಿಖೆ ಕೋರಿದ್ದ ಪಿಐಎಲ್‌ ವಜಾಗೊಳಿಸಿದ ಸುಪ್ರೀಂ

ಕರ್ನಾಟಕ ಸರ್ಕಾರದ ಸಚಿವರ ಮೇಲೆ ನಡೆದಿದೆ ಎನ್ನಲಾದ ಹನಿಟ್ರ್ಯಾಪ್‌ ಪ್ರಕರಣದ ತನಿಖೆಗೆ ಕೋರಿ ಬಿನಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್‌ನ ನ್ಯಾ. ವಿಕ್ರಮ್‌ನಾಥ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿತು. ವಿಚಾರಣೆ ವೇಳೆ ಅರ್ಜಿದಾರ ಬಿನಯ್ ಕುಮಾರ್ ಸಿಂಗ್ ತರಾಟೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯವು, ನೀವು ಜಾರ್ಖಂಡ್ ಮೂಲದವರು, ಕರ್ನಾಟಕಕ್ಕೂ ನಿಮಗೂ ಏನು ಸಂಬಂಧ, ಪೊಲಿಟಿಕಲ್ ನಾನ್‌ ಸೆನ್ಸ್‌ ಗಳನ್ನು ವಿಚಾರಣೆ ನಡೆಸಲು ನಾವು ಇಲ್ಲಿ ಕುಳಿತಿಲ್ಲ. ನ್ಯಾಯಾಧೀಶರು ಯಾಕೆ ಹನಿಟ್ರ‍್ಯಾಪ್‌ಗೆ ಒಳಗಾಗುತ್ತಾರೆ, ಅದನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ.  ಸುಪ್ರೀಂ ಕೋರ್ಟ್‌ನಲ್ಲಿ ನಾವು ಮಾಡುವುದಕ್ಕೆ  ಸಾಕಷ್ಟು ಕೆಲಸಗಳಿವೆ ಇದೆ ಎಂದು ಹೇಳಿದೆ.

ಕರ್ನಾಟಕದಲ್ಲಿ ಹಿರಿಯ ಸಚಿವರು, ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರನ್ನು ಗುರಿಯಾಗಿಟ್ಟುಕೊಂಡು ಹನಿ ಟ್ರ‍್ಯಾಪ್ ಪ್ರಕರಣ ನಡೆದಿದೆ. ಈ ಬಗ್ಗೆ ಸಚಿವರೇ ವಿಧಾನಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಾಗೀ ಈ ಬಗ್ಗೆ ಸಿಬಿಐ ಅಥಾವ ಹೈಕೋರ್ಟ್  ಜಡ್ಜ್‌  ನೇತೃ ತ್ವದಲ್ಲಿ ಎಸ್‌ಐಟಿ ತನಿಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

Related Posts

Leave a Reply

Your email address will not be published. Required fields are marked *