Saturday, February 22, 2025
Menu

ನ್ಯಾಯಾಧೀಶರ ವಿರುದ್ಧ ದೂರು ವಿಚಾರಣೆಗೆ ಅನುಮತಿ: ಲೋಕಪಾಲ ಆದೇಶಕ್ಕೆ ಸುಪ್ರೀಂ ತಡೆ

2013ರ ಲೋಕಾಯುಕ್ತ ಹಾಗೂ ಲೋಕಪಾಲ ಕಾಯ್ದೆಯಲ್ಲಿ ಹೈಕೋರ್ಟ್‌ ಹಾಲಿ ಜಡ್ಜ್‌ಗಳು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿದೆ. ಆದರೂ ಲೋಕಪಾಲರು ಹೈಕೋರ್ಟ್‌ ಜಡ್ಜ್‌ಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುತ್ತಿರುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಹೈಕೋರ್ಟ್ ಹಾಲಿ ನ್ಯಾಯಾಧೀಶರ ವಿರುದ್ಧದ ದೂರುಗಳ ವಿಚಾರಣೆಗೆ ಅನುಮತಿ ನೀಡಿದ ಲೋಕಪಾಲರ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿ, ಇದು ಅಕ್ರಮವಾಗಿದ್ದು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿದೆ. ಈ ಸಂಬಧ ಕೇಂದ್ರ ಸರ್ಕಾರ ಹಾಗೂ ಲೋಕಪಾಲ ರಿಜಿಸ್ಟ್ರಾರ್‌ಗೆ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ನೋಟಿಸ್ ಜಾರಿ ಮಾಡಿದೆ.

ಜನವರಿ 27 ರಂದು ಲೋಕಪಾಲ್ ಹೊರಡಿಸಿದ್ದ ಆದೇಶಕ್ಕೆ ಆರಂಭಿಸಿದ್ದ ಸ್ವಯಂಪ್ರೇರಿತ ವಿಚಾರಣೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ವಿಶೇಷ ಪೀಠವು ಕೇಂದ್ರ ಸರ್ಕಾರ ಮತ್ತು ಇತರ ಸಂಬಂಧಪಟ್ಟವರಿಗೆ ನೋಟೀಸ್‌ ನೀಡಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಅಭಯ್ ಎಸ್ ಓಕಾ ಅವರನ್ನೂ ಒಳಗೊಂಡ ವಿಶೇಷ ಪೀಠವು, ದೂರುದಾರರು ನ್ಯಾಯಾಧೀಶರ ಹೆಸರನ್ನು ಬಹಿರಂಗಪಡಿಸದಂತೆ ತಡೆಯಾಜ್ಞೆ ನೀಡಿದೆ. ದೂರುದಾರರು ಸಲ್ಲಿಸಿದ ದೂರನ್ನು ಗೌಪ್ಯವಾಗಿಡುವಂತೆಯೂ ಸೂಚಿಸಿದೆ. ಹೈಕೋರ್ಟ್‌ನ ಹಾಲಿ ಹೆಚ್ಚುವರಿ ನ್ಯಾಯಾಧೀಶರು, ರಾಜ್ಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿದ್ದಾರೆ ಮತ್ತು ಖಾಸಗಿ ಕಂಪನಿಯು ದೂರುದಾರರ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ನಿಭಾಯಿಸಬೇಕಾಗಿದ್ದ ಅದೇ ಹೈಕೋರ್ಟ್‌ನ ನ್ಯಾಯಾಧೀಶರ ವಿರುದ್ಧ ಸಲ್ಲಿಸಲಾದ ಎರಡು ದೂರುಗಳ ಮೇಲೆ ಲೋಕಪಾಲ್ ಈ ಆದೇಶವನ್ನು ಹೊರಡಿಸಿದೆ.

Related Posts

Leave a Reply

Your email address will not be published. Required fields are marked *