ಬಾಹ್ಯಕಾಶದಲ್ಲಿ ಕೆಲವು ತಿಂಗಳಿಂದ ಸಿಲುಕಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಾರ್ಚ್ 19ರಂದು ಭೂಮಿಗೆ ಮರಳಲಿದ್ದಾರೆ.
ಅಮೆರಿಕ ಬಾಹ್ಯಕಾಶ ಸಂಸ್ಥೆ ನಾಸಾ ಮಾರ್ಚ್ 10 ಮತ್ತು 11ರಂದು ಕ್ರ್ಯೂ-10 ಕಾರ್ಯಾಚರಣೆ ಆರಂಭಿಸಲಿದ್ದು, 8 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಇರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಅವರನ್ನು ವಾಪಸ್ ಕರೆತರಲಿದೆ.
ಪ್ರಸ್ತುತ ಬಾಹ್ಯಕಾಶ ಕೇಂದ್ರದಲ್ಲಿ ಫ್ಲೈಯಿಂಗ್ ಲ್ಯಾಬೋರೇಟರಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಸುನೀತಾ ವಿಲಿಯಮ್ಸ್ ತಮ್ಮ ಕೆಲಸಗಳನ್ನು ಇದೀಗ ಹೊರಡುವ ಗಗನಯಾತ್ರಿಗಳ ಕೈಗೆ ಒಪ್ಪಿಸಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.
ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಭೂಮಿಗೆ ಮಾರ್ಚ್ 19ರಂದು ಮರಳಲಿದ್ದಾರೆ. ಸುಮಾರು ಒಂದು ವಾರಗಳ ಕಾರ್ಯಾಚರಣೆ ಇದಾಗಿದೆ ಎಂದು ನಾಸಾ ಹೇಳಿದೆ.