ನಟ ದರ್ಶನ್ ಇನ್ಸ್ಟಾಗ್ರಾಮ್ ನಲ್ಲಿ 5 ಸೆಲೆಬ್ರಿಟಿಗಳನ್ನು ಅನ್ ಫಾಲೋ ಮಾಡಿದ್ದಾರೆ. ಸುಮಲತಾ, ಅಭಿಷೇಕ್ ಅಂಬರೀಶ್, ಅಭಿಷೇಕ್ ಪತ್ನಿ ಅವಿವಾ ಬಿದ್ದಪ್ಪ, ಸಹೋದರ ದಿನಕರ್, ಡಿ.ಕಂಪನಿ ಆಫಿಶಿಯಲ್ ಪೇಜ್, ಪುತ್ರ ವಿನೀಶ್ ರನ್ನ ದರ್ಶನ್ ಫಾಲೋ ಮಾಡುತ್ತಿದ್ದರು. ಎಲ್ಲರನ್ನೂ ಅನ್ ಫಾಲೋ ಮಾಡಿದ್ದು, ಸಹೋದರ ದಿನಕರ್, ಡಿ.ಕಂಪನಿ ಆಫಿಶಿಯಲ್ ಪೇಜ್, ಪುತ್ರ ವಿನೀಶ್ ರನ್ನ ಅನ್ ಫಾಲೋ ಮಾಡಲು ಕಾರಣ ಏನು ಎಂಬುದು ಅಭಿಮಾನಿಗಳ ಕುತೂಹಲ ವಾಗಿದೆ.
ದರ್ಶನ್ ಅನ್ ಫಾಲೋ ಮಾಡಿದ ಬೆನ್ನಲೇ ನಟಿ ಸುಮಲತಾ ಪೋಸ್ಟ್ ಮಾಡಿ ದರ್ಶನ್ ಗೆ ತಿರುಗೇಟು ನೀಡಿದ್ದಾರೆ. ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ ಯಾರು ಸತ್ಯವನ್ನ ತಿರುಚುತ್ತಾರೆ, ತಮ್ಮದೇ ತಪ್ಪು ಇಟ್ಕೊಂಡು ಬೇರೆಯವರ ಮೇಲೆ ಹಾಕಿ ನೋವು ಮಾಡೋದು, ತಮ್ಮ ಮೇಲಿನ ನಿಂದನೆ ಯನ್ನ ಬೇರೆವರ ಮೇಲೆ ಹಾಕೋದು, ಗೂಬೆ ಕೂರಿಸೋದು ಮಾಡಿ ತಮ್ಮನ್ನು ತಾವು ಹೀರೋ ಎಂಬಂತೆ ಬಿಂಬಿಸಿಕೊಳ್ಳೋದು ಎಂದು ಸುಮಲತಾ ಪೋಸ್ಟ್ ಮಾಡಿದ್ದಾರೆ. ದರ್ಶನ್ ಅನ್ ಫಾಲೋ ಮಾಡಿದ ಕೆಲವೇ ಗಂಟೆಯಲ್ಲಿ ಸುಮಲತಾ ಈ ಪೋಸ್ಟ್ ಮಾಡಿದ್ದಾರೆ.