ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ನಟಿ ಶ್ರೀಮತಿ ಸುಧಾ ರಾಣಿ ಆಯ್ಕೆಯಾಗಿದ್ದು, ಬಮೂಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುವುದಾಗಿ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದ್ದಾರೆ.
ನಂಬಿಕೆಯ ಮೇಲೆ ನಿರ್ಮಿತವಾದ ನಂದಿನಿಯು ರೈತರ ಮೇಲಿನ ಬದ್ಧತೆ, ಶುದ್ಧ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರದೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ತಿಳಿಸಿದ್ದಾರೆ.
ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಶ್ರೀಮತಿ ಸುಧಾ ರಾಣಿ ಅವರು ಆಯ್ಕೆಯಾಗಿದ್ದು, ಬಮೂಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ. #Nandini #BAMUL #KMF pic.twitter.com/xIVaFDJwKP
— DK Suresh (@DKSureshINC) February 9, 2026
ಬಹುಭಾಷಾ ನಟಿ ತಮನ್ನಾ ಭಾಟಿಯಾ ಮೈಸೂರು ಸ್ಯಾಂಡಲ್ ಸೋಪ್ಗೆ ಪ್ರಚಾರ ರಾಯಭಾರಿಯಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗಿಯಾದರು. ಹೊಸ ರೂಪದ ಸೋಪನ್ನು ಬಿಡುಗಡೆ ಮಾಡಿದರು. ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಹೇಳುವ ಮೂಲಕ ತಮನ್ನಾ ಮಾತು ಆರಂಭಿಸಿ, ಇಂಗ್ಲಿಷ್ನಲ್ಲಿ ಮುಂದುವರಿಸಿದರು.
ನನಗೆ ಇದು ತುಂಬಾ ದೊಡ್ಡ ಗೌರವ ಹಾಗೂ ಹೆಮ್ಮೆ. ಕೆಸ್ಡಿಎಲ್ ಕುಟುಂಬದಲ್ಲಿ ನಾನೂ ಒಬ್ಬಳಾಗಿದ್ದೇನೆ. ಎಷ್ಟೇ ಸೋಪ್ಗಳು ಮಾರುಕಟ್ಟೆಗೆ ಬಂದರೂ ಮೈಸೂರ್ ಸ್ಯಾಂಡಲ್ ಸೋಪ್ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದೆ. ನಾನು ತುಂಬಾ ಅದೃಷ್ಟವಂತೆ. ಮೈಸೂರ್ ಸ್ಯಾಂಡಲ್ ಸೋಪಿಗೆ ರಾಯಭಾರಿ ಆಗಿದ್ದೇನೆ’ ಎಂದು ಹೇಳಿದರು.


